More

    ಶ್ರೀ ಮನೋನ್ಮಣಿ ವೈದ್ಯನಾಥೇಶ್ವರ ವಾರ್ಷಿಕೋತ್ಸವ

    ಯಳಂದೂರು : ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿರುವ ಸಾವಿರಾರು ವರ್ಷಗಳ ಐತಿಹ್ಯ ಇರುವ ಶ್ರೀ ಮನೋನ್ಮಣಿ ಸಹಿತ ಶ್ರೀ ವೈದ್ಯನಾಥೇಶ್ವರ ವಾರ್ಷಿಕೋತ್ಸವವು ಸೋಮವಾರ ಸಂಭ್ರಮ ಸಡಗರದಿಂದ ನಡೆಯಿತು.

    ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಇದರ ನಿಮಿತ್ತ ಶ್ರೀ ವೈದ್ಯನಾಥೇಶ್ವರ ಸೇವಾ ಸಮಿತಿಯಿಂದ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಪ್ರಧಾನ ಗಣಪತಿ ಪೂಜೆ, ಶುದ್ಧ ಪುಣ್ಯಹ, ಕಳಸ ಪೂಜೆ, ಗಣಪತಿ ಹೋಮ, ಪಾರ್ವತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ನಡೆದವು. ಬಳಿಕ ಮಾಂಬಳ್ಳಿ ಹಾಗೂ ಅಗರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಯಿತು. ರಸ್ತೆ ಬದಿಯಲ್ಲಿ ದೇವರಿಗೆ ನೂರಾರು ಭಕ್ತರು ಪೂಜೆಯನ್ನು ಕೊಡುವ ಮೂಲಕ ಭಕ್ತಿ ಮೆರೆದರು. ಗಾರುಡಿಗೊಂಬೆ, ಚಂಡೆಮದ್ದಳೆ, ವೀರಗಾಸೆ, ಕಂಸಾಳೆ, ಡೊಳ್ಳುಕುಣಿತ, ದೇವರಪಟದ ಕುಣಿತ, ನಂದಿಕಂಬ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಅಲ್ಲದೆ ಇದಕ್ಕಾಗಿ ದೇಗುಲವನ್ನು ತಳಿರು-ತೋರಣ, ಹಸಿರು ಚಪ್ಪರ, ವಿಶೇಷ ಹೂವುಗಳ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಅಲಕಂಕರಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts