ಬೆಂಗಳೂರು ನಗರದ 7 ಕ್ಷೇತ್ರಗಳ ಮೇಲುಸ್ತುವಾರಿಯಾಗಿ ತೆಲಂಗಾಣದ ಎಡಿಜಿಪಿ ಡಾ.ಸೌಮ್ಯ ಮಿಶ್ರಾ ನೇಮಕ

Dr Soumya Mishra
Published on

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ- 2023ರ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಏಳು ಕ್ಷೇತ್ರಗಳ ಮೇಲುಸ್ತುವಾರಿ ಆಗಿ ತೆಲಂಗಾಣ ರಾಜ್ಯದ ಎಡಿಜಿಪಿ ಡಾ.ಸೌಮ್ಯ ಮಿಶ್ರಾ ನೇಮಕಗೊಂಡಿದ್ದಾರೆ.

ಬೆಂಗಳೂರಿನ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರಗಳ ಮೇಲುಸ್ತುವಾರಿಯಾಗಿ ಅವರು ಕಾರ್ಯನಿರ್ವಹಿಸಲಿರುವರು.

ಈ ಏಳು ವಿಧಾನಸಭಾ ಕ್ಷೇತ್ರಗಳಲ್ಲಿನ ಕಾನೂನು ಸುವ್ಯವಸ್ಥೆಯ ಮೇಲುಸ್ತುವಾರಿ ನಿಭಾಯಿಸಲಿರುವ ಸೌಮ್ಯ, ವಿಧಾನಸಭಾ ಚುನಾವಣೆ ಸಂಬಂಧಿತ ಅಕ್ರಮ ಮತ್ತು ದೂರುಗಳ ಮೇಲೆ ನಿಗಾ ಇರಿಸಲಿದ್ದಾರೆ. ಆ ಮೂಲಕ ಸುಗಮ ಚುನಾವಣೆ ನಡೆಯುವಂತೆ ಕ್ರಮಕೈಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net