ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸುವಲ್ಲಿ ಚಿದಾನಂದಮೂರ್ತಿಯವರ ಶ್ರಮ ಅಪಾರ: ಸಂಸದ ತೇಜಸ್ವಿ ಸೂರ್ಯ

Chidananda Murty 11 Jan 20
Published on

ಬೆಂಗಳೂರು: ಕನ್ನಡ ಭಾಷೆಯ ಉಳಿವು ಹಾಗೂ ಏಳಿಗೆಗೆ ಜೀವನವಿಡೀ ದುಡಿದವರು ಚಿದಾನಂದಮೂರ್ತಿಯವರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸುವಲ್ಲಿ ಅವರ ಪಾತ್ರ ಅಪಾರವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಇಂದು ನಿಧನರಾದ ಹಿರಿಯ ಸಂಶೋಧಕ, ಕನ್ನಡ ಲೇಖಕ, ವಿದ್ವಾಂಸ ಡಾ. ಚಿದಾನಂದಮೂರ್ತಿಯವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಚಿ.ಮೂ.ಅವರು ಕನ್ನಡ ಸಾರಸ್ವತ ಲೋಕದ ದಿಗ್ಗಜರು. ನಮ್ಮ ತಂದೆಯವರಿಗೆ ಕನ್ನಡದ ಮೇಷ್ಟ್ರು ಆಗಿದ್ದರು. ಕಾಲೇಜು ದಿನಗಳಿಂದಲೂ ಅವರನ್ನು ಭೇಟಿಯಾಗುತ್ತಿದ್ದೆವು ಎಂದು ನೆನಪಿಸಿಕೊಂಡರು.

ಟಿಪ್ಪು ಸುಲ್ತಾನನ ಜಯಂತಿ ಆಚರಣೆ ಮಾಡಬಾರದು. ಆತ ಒಬ್ಬ ಮತಾಂಧನೆಂದು ದಾಖಲೆಗಳನ್ನು ಜನರ ಮುಂದೆ ಇಟ್ಟಿದ್ದವರು ಚಿದಾನಂದಮೂರ್ತಿ. ಹಂಪಿಯನ್ನು ಐತಿಹಾಸಿಕ ಸ್ಥಳ ಮಾಡುವಲ್ಲಿ, ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಅಪಾರ ಶ್ರಮ ವಹಿಸಿದ್ದಾರೆ. ಹದಿನೈದು ದಿನಗಳ ಹಿಂದಷ್ಟೇ ಅವರನ್ನು ಭೇಟಿಯಾಗಿದ್ದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net