ರಾಜ್ಯದಲ್ಲಿ ಬಿಜೆಪಿ 17-18 ಸೀಟು ಬರುತ್ತೆ; 1 ವರ್ಷದಲ್ಲೇ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಕುಗ್ಗಿದೆ: ತೇಜಸ್ವಿ ಸೂರ್ಯ

Untitled design (44)
Published on

ಬೆಂಗಳೂರು: ಬೆಂಗಳೂರು ದಕ್ಷಿಣ ಜನರ ಆಶೀರ್ವಾದದಿಂದ ಬಹಳ ದೊಡ್ಡ ಅಂತರದಿಂದ ಗೆಲುವಾಗುತ್ತಿದೆ. ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು. ನಾನು ಮತ್ತೆ ಜನರ ದ್ವನಿಯಾಗಿ ಪಾರ್ಲಿಮೆಂಟ್​ನಲ್ಲಿ ಪ್ರತಿನಿಧಿಸಬೇಕೆಂದು ಜನರು ಆಶೀರ್ವಾದ ಮಾಡಿದ್ದಾರೆ. ಒಬ್ಬ ಯುವಕನ ಮೇಲೆ ಇಷ್ಟೊಂದು ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

"ನಮ್ಮ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೀನಿ. ಕಳೆದ ಐದು ವರ್ಷದ ಹಿಂದೆ ಅಯ್ಕೆ ಆದಾಗ ನನಗೆ ಅನುಭವದ ಕೊರತೆ ಇತ್ತು. ಪ್ರತಿಯೊಂದನ್ನು ಈಗ ಕಲಿತಿದ್ದೇನೆ, ಇನ್ನು ಅಭಿವೃದ್ಧಿಗೆ ಹೆಚ್ಚು ಪರಿಶ್ರಮ ಹಾಕುತ್ತೇನೆ. ಕರ್ನಾಟಕದ ದ್ವನಿಯಾಗಿ ಸಂಸತ್ತಿನಲ್ಲಿ ನನ್ನ ಕರ್ತವ್ಯ ಈಡೇರಿಸುತ್ತೇನೆ. ಇಡೀ ರಾಜ್ಯದಲ್ಲಿ ಬಿಜೆಪಿ ಪರವಾಗಿ ಜನರು ಮತದಾನ ಮಾಡಿದ್ದಾರೆ. ಅವರಿಗೆಲ್ಲಾ ಹೃತ್ಪೂರ್ವಕ ಧನ್ಯವಾದಗಳು" ಎಂದರು.

"290 ಕ್ಷೇತ್ರಗಳಲ್ಲಿ ಅಂತರ ಇದೆ. ಎರಡು ಮೂರು ಗಂಟೆಗಳಲ್ಲಿ ಕ್ಲಿಯರ್ ಪಿಕ್ಚರ್ ಲಭ್ಯವಾಗುತ್ತದೆ. ಮತ್ತೆ ಮೋದಿ ಪ್ರಧಾನಿ ಆಗ್ತಾರೆ. ಕರ್ನಾಟಕದಲ್ಲಿ 17ರಿಂದ 18 ಸೀಟು ಬರುತ್ತದೆ. ಒಂದೇ ವರ್ಷದಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕುಗ್ಗಿದೆ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net