ತಹಸೀಲ್ದಾರ್ ನಾಗವೇಣಿ ಅಧಿಕಾರ ಸ್ವೀಕಾರ

CTD 23 NAGAVENI-02
Published on

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ತಹಸೀಲ್ದಾರ್ ಆಗಿ ಡಾ.ನಾಗವೇಣಿ ಅವರು ಸೋಮವಾರ ನಿರ್ಗಮಿತ ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ ಅವರಿಂದ ಅಧಿಕಾರ ಸ್ವೀಕರಿಸಿದರು.

ಎಸಿ ಗ್ರೇಡ್‌ಗೆ ಪದನ್ನೋತಿ ಪಡೆದಿರುವ ಸತ್ಯನಾರಾಯಣ ಅವರು, ರಾ.ಹೆ.ಪ್ರಾಧಿಕಾರ ವಿಶೇಷ ಭೂಸ್ವಾಧಿನ ಅಧಿಕಾರಿಯಾಗಿ ಚಿಕ್ಕಮಗಳೂರು ವರ್ಗವಾಗಿದ್ದಾರೆ.

2014ರ ಬ್ಯಾಚಿನ ಕೆಎಎಸ್ ಅಧಿಕಾರಿ ನಾಗವೇಣಿ ಅವರು ಹರಪನಹಳ್ಳಿ, ಹೊನ್ನಾಳಿ, ಜಗಳೂರಲ್ಲಿ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕೆಎಎಸ್ ಪಾಸು ಮಾಡುವ ಮೊದಲು ಅವರು ಆರೋಗ್ಯ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net