ಪಟಾಕಿ ಮಳಿಗೆಗೆ ಪರಿಶೀಲಿಸಿದ ತಹಸೀಲ್ದಾರ್

thahasildhar visit freedam park
ತಹಸೀಲ್ದಾರ್ ಬಿ.ಎನ್.ಗಿರೀಶ್, ಕಾರ್ಮಿಕ ಇಲಾಖೆ ಅಧಿಕಾರಿ ವೇಣುಗೋಪಾಲ್ ಅವರು ಫ್ರೀಡಂಪಾರ್ಕ್‌ನಲ್ಲಿ ತೆರೆದಿರುವ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
Published on

ಶಿವಮೊಗ್ಗ: ನಗರದ ಫ್ರೀಡಂಪಾರ್ಕ್‌ನಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು ತಹಸೀಲ್ದಾರ್ ಬಿ.ಎನ್.ಗಿರೀಶ್ ಬುಧವಾರ ಮಾರಾಟ ಮಳಿಗೆಗಳಿಗೆ ಭೇಟಿ ಪರಿಶೀಲಿಸಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳಿಗೆಗಳ ಪರವಾನಗಿ, ಅಂಗಡಿ ಮಾಲೀಕರ ಗುರುತಿನ ಚೀಟಿ, ವೆಂಡರ್‌ಗಳ ಗುರತಿನ ಚೀಟಿ, ಬಾಲಕಾರ್ಮಿಕರನ್ನು ನೇಮಿಸಿಲ್ಲ ಎಂಬುದರ ಬಗ್ಗೆ ತಪಾಸಣೆ ನಡೆಸಿದರು.

ಹಸಿರು ಪಟಾಕಿ ಮಾರಾಟ ಮಾಡಲಾಗುತ್ತಿದೆಯೇ ಎಂಬುದರ ಬಗ್ಗೆ ಮತ್ತು ವಾಹನಗಳನ್ನ ಸ್ಟಾಲ್ ಬಳಿ ಇಟ್ಟುಕೊಳ್ಳದಂತೆ ಸೂಚನೆ ನೀಡಲಾಯಿತು. ಫೈರ್ ಬಕೆಟ್, ಡ್ರಮ್ ಬಕೆಟ್‌ಗಲ್ಲ್ಲಿ ಮರಳು ಸಂಗ್ರಹಿಸಿಟ್ಟುಕೊಳ್ಳುವ ಬಗ್ಗೆ ಅರಿವು ಮೂಡಿಸಿದರು. ಮಳಿಗೆಗಳ ನಡುವೆ ಕನಿಷ್ಠ 8ರಿಂದ 10 ಅಡಿ ದೂರವಿರಬೇಕು. ತಗಡು ಶೀಟಲ್ಲೇ ಅಂಗಡಿ ಕಟ್ಟಿಕೊಳ್ಳಬೇಕಿದೆ ಎಂಬ ಸೂಚನೆಯನ್ನು ಗಿರೀಶ್ ನೀಡಿದರು.

ಮಕ್ಕಳನ್ನು ಬಳಸಿಕೊಳ್ಳದಂತೆ ಸೂಚನೆ

ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಾಪಿಸಲಾಗುತ್ತಿರುವ ಪಟಾಕಿ ಮಾರಾಟ ಮಳಿಗೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳದಂತೆ ಕಾರ್ಮಿಕ ಇಲಾಖೆ ಸೂಚನೆ ನೀಡಿದೆ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net