ಚರಂಡಿ ನೀರು ಸಾಗಲು ತಹಸೀಲ್ದಾರ್ ಬರಬೇಕಾಯಿತು!

IMG-20240801-WA0348
Published on


ಆಲೂರು : ಡೆಂೆ ನಿಯಂತ್ರಣಕ್ಕಾಗಿ ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕೆಂಬ ಮನವಿಗೆ ಕ್ಯಾರೆ ಎನ್ನದೆ, ಮನೆ ಮುಂದೆ ಸ್ವಚ್ಛತಾ ಕಾರ್ಮಿಕರು ಬಂದರೂ ಕಾಮಗಾರಿಗೆ ತಡೆದಿದ್ದ ಸಹೋದರರ ಮನವೊಲಿಸಲು ತಾಲೂಕು ಆಡಳಿತದ ಅಧಿಕಾರಿಗಳೇ ಖುದ್ದಾಗಿ ಬಂದು ಅರಿವು ಮೂಡಿಸಿದರು.

ತಾಲೂಕಿನ ಹಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಟ್ಟನಹಳ್ಳಿಯಲ್ಲಿ ಸಾಲಾಗಿ ಒಂದೇ ಕುಟುಂಬದ ಸಹೋದರರ ಮನೆಗಳಿವೆ. ಆದರೆ ಆತನ ಮನೆ ಮುಂದಿನ ಚರಂಡಿ ನೀರು ನನ್ನ ಮನೆ ಮುಂದೆ ನಿಲ್ಲ ಬರಬಾರದು, ಮತ್ತೊಬ್ಬನ ಮನೆ ಮುಂದಿನ ಕೊಳಚೆ ನೀರು ನನ್ನ ಮನೆ ಮುಂದೆ ಬರಬಾರದೆಂದು ತಮ್ಮ ತಮ್ಮ ವ್ಯಾಪ್ತಿಗೆ ಕಟ್ಟೆ ಕಟ್ಟಿ ಚರಂಡಿ ನೀರಿಗೆ ಆಶ್ರಯ ನೀಡಿದ್ದರು.


ಹಲವು ದಿನಗಳಿಂದ ನೀರು ನಿಂತಲ್ಲೇ ನಿಂತಿದ್ದರಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡಿ ಅಶುಚಿತ್ವ ನಿರ್ಮಾಣವಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಅವರು ಸಹೋದರರಿಗೆ ಬುದ್ಧಿ ಹೇಳಲು ಸಾಕಷ್ಟು ಸಲ ಬಂದರೂ ಪ್ರಯೋಜನವಾಗದೆ ವಾಪಾಸಾಗಿದ್ದರು. ಹೀಗಾಗಿ ಸ್ಥಳಕ್ಕೆ ತಹಸೀಲ್ದಾರ್, ತಾಪಂ ಇಒ ಹಾಗೂ ಪೊಲೀಸರು ಗ್ರಾಮಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net