

ರೂರ್ಕಿ: ಸೆಲ್ಫಿ ವ್ಯಾಮೋಹಕ್ಕೆ ಸಿಲುಕಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಪಟ್ಟಣದಲ್ಲಿ ನಡೆದಿದೆ.
ಸಿದ್ಧಾರ್ಥ್ ಸೈನಿ (19) ಮತ್ತು ಶಿವಂ ಸೈನಿ(16) ಮೃತ ದುರ್ದೈವಿಗಳಾಗಿದ್ದು, ರೈಲ್ವೇ ಸೇತುವೆಯ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸಿದ್ದಾರ್ಥ್ ರಿಷಿಕೇಶದ ಬಳಿ ಎಲೆಕ್ನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಕಲಿಯುತ್ತಿದ್ದು, ತನ್ನ ಪರೀಕ್ಷೆ ತಯಾರಿಗಾಗಿ ಹಳ್ಳಿಗೆ ಬಂದಿದ್ದನು . ಶಿವಂ ಶಾಲೆಯಲ್ಲಿ ಓದುತ್ತಿದ್ದ.
ಇದನ್ನೂ ಓದಿ: ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕನ್ನಡದ ನಿರ್ಮಾಪಕ…ಪ್ರತಿದೂರು ದಾಖಲಿಸಿದ ಹೆಂಡತಿ
ಧಾರ್ಮಿಕ ಪೂಜಾ ಕಾರ್ಯದ ನಿಮಿತ್ತ ಕುಟುಂಬ ಸದಸ್ಯರೊಂದಿಗೆ ಬಾಲಕರು ಲಕ್ಷಾರ್‌ಗೆ ಆಗಮಿಸಿದ್ದರು. ಈ ವೇಳೆ ರೈಲ್ವೆ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಯೋಚಿಸಿದ್ದರು. ದೆಹಲಿಗೆ ಹೋಗುವ ರೈಲು ತಮ್ಮ ಕಡೆಗೆ ವೇಗವಾಗಿ ಬರುತ್ತಿದೆ ಎಂದು ತಿಳಿಯದೆ, ಸೆಲ್ಫಿ ತೆಗೆದುಕೊಳ್ಳಲು ನದಿಗೆ ಅಡ್ಡಲಾಗಿರುವ ರೈಲ್ವೆ ಸೇತುವೆಯನ್ನು ಏರಿದ್ದಾರೆ.
ಈ ವೇಳೆ ವೇಗವಾಗಿ ಬಂದ ರೈಲು ಅವರ ಮೇಲೆ ಹರಿದಿದ್ದು, ದೇಹದ ಭಾಗಗಳು ರೈಲ್ವೆ ಹಳಿಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇನ್ನು ಮಕ್ಕಳ ಸಾವಿನಿಂದಾಗಿ ಎರಡು ಮನೆಗಳಲ್ಲಿ ಶೋಕ ಮಡುಗಟ್ಟಿದೆ. ಸದ್ಯ, ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)