ParagraphShortcodesFormats
ಅಮೃತಸರ್: ಪ್ಲೇಯರ್ಸ್ ಅನ್ನೌನ್ ಬ್ಯಾಟಲ್ ಗ್ರೌಂಡ್ (ಪ್ಬ್ಜಿ) ಮೊಬೈಲ್ ಗೇಮ್ ಆಟವಾಡುತ್ತಲೇ ಇರಲು ಬಾಲಕನೊಬ್ಬ ಬರೋಬ್ಬರಿ 16 ಲಕ್ಷ ರೂ. ಖರ್ಚು ಮಾಡಿದ್ದಾನೆ. ಪ್ರಕರಣ ಪೊಲೀಸ್ ಠಾಣೆಟ್ಟಿಲೇರಿದ್ದರೂ ಅವರು ಕೂಡ ಅಸಹಾಯಕರಾಗಿದ್ದಾರೆ. ಏಕೆಂದರೆ, ಬಾಲಕ ಗೊತ್ತಿದ್ದೇ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದಾನೆ ಎಂದು ಕೈಚೆಲ್ಲಿದ್ದಾರೆ.

ಪಬ್ಜಿ ಗೇಮ್ ಮೊಬೈಲ್ ಗೇಮ್ ಮಾತ್ರವಲ್ಲ, ಇದೊಂದು ಗೀಳಾಗಿ ಪರಿಣಮಿಸುತ್ತದೆ. ಇದನ್ನು ಆಟವಾಡಲು ಹೋಗಿ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ದುಡ್ಡು ಕಳೆದುಕೊಂಡ ಪ್ರಕರಣಗಳು ನಡೆದಿದ್ದರೂ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದು ಇದೇ ಮೊದಲ ಬಾರಿ ಎನ್ನಲಾಗಿದೆ.
ಪಬ್ಜಿ ಆಟವನ್ನು ಮುಂದುವರಿಸಲು ಹಲವು ಹಂತಗಳನ್ನು ದಾಟಬೇಕಾಗುತ್ತದೆ ಹಾಗೂ ಅದಕ್ಕಾಗಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜತೆಗೆ ಆ್ಯಪ್ನಲ್ಲಿ ಕೆಲವನ್ನು ಖರೀದಿಸಲು ಸೂಚಿಸಲಾಗುತ್ತದೆ. ಪಂಜಾಬ್ನ 17 ವರ್ಷದ ಬಾಲಕನಿಗೆ ಇದೊಂದು ಗೀಳಾಗಿ ಪರಿಣಮಿಸಿದ್ದರಿಂದ ಇಷ್ಟೊಂದು ಮೊತ್ತ ಖರ್ಚು ಮಾಡಿದ್ದಾನೆ.
ತಂದೆಯ ಮೂರು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಬಾಲಕ ಒಂದೊಂದೇ ಖಾತೆಯಿಂದ ತಂದೆಗೆ ತಿಳಿಯದಂತೆ ಹಣ ವರ್ಗಾಯಿಸಿದ್ದಾನೆ. ಅವರಿಗೆ ಗೊತ್ತಾಗದಿರಲು ಬ್ಯಾಂಕ್ನಿಂದ ಬರುತ್ತಿದ್ದ ಮೇಸೆಜ್ಗಳನ್ನು ಡಿಲೀಟ್ ಮಾಡುತ್ತಿದ್ದ.
ಮೊಬೈಲ್ ಫೋನ್ನ್ನು ಅಭ್ಯಾಸಕ್ಕಾಗಿ ಉಪಯೋಗಿಸುತ್ತಿದ್ದೇನೆ ಪಾಲಕರಿಗೆ ತಿಳಿಸಿದರೂ, ಆತ ಹೆಚ್ಚಿನ ಸಮಯವನ್ನು ಪಬ್ಜಿ ಆಡುವುದರಲ್ಲಿಯೇ ಕಳೆಯುತ್ತಿದ್ದ. ತನಗೆ ಮಾತ್ರವಲ್ಲ, ತನ್ನೊಂದಿಗೆ ಆಟವಾಡುತ್ತಿದ್ದವರಿಗಾಗಿಯೂ ಅಪ್ಗ್ರೇಡ್ಗಳನ್ನು ಖರೀದಿಸುತ್ತಿದ್ದ.
ತಂದೆ ಸರ್ಕಾರಿ ನೌಕರರಾಗಿದ್ದು, ಆತನ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ವೆಚ್ಚಕ್ಕಾಗಿ ತಂದೆ ಈ ಹಣವನ್ನು ಉಳಿತಾಯ ಮಾಡಿದ್ದರು. ಇತ್ತೀಚೆಗೆ ಪಾಲಕರ ಖಾತೆಯಲ್ಲಿದ್ದ ಹಣದ ಬಗ್ಗೆ ಬ್ಯಾಂಕಿನಲ್ಲಿ ವಿಚಾರಿಸಿದಾಗ 16 ಲಕ್ಷ ರೂ. ಖರ್ಚಾಗಿರುವುದು ಗೊತ್ತಾಗಿದೆ. ಆತ ತಿಳಿದೇ ಈ ಮೊತ್ತ ಖರ್ಚು ಮಾಡಿರುವುದರಿಂದ ಪೊಲೀಸರ ಕೂಡ ಏನೂ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.