ಒಣಗಿದ ಬಟ್ಟೆ ತರಲು ಮಹಡಿಗೆ ಹೋದ ಬಾಲಕಿ ಎದುರು ಕೋತಿಯ ರೂಪದಲ್ಲಿ ಬಂದ ಜವರಾಯ..!

Monkey
Published on

ಲಖನೌ: ಮಹಡಿಯ ಮೇಲೆ ಒಣಗಲು ಇಟ್ಟಿದ್ದ ಬಟ್ಟೆಗಳು ತರಲು ಹೋದ 13 ವರ್ಷದ ಬಾಲಕಿಯನ್ನು ಮಂಗಗಳ ಗುಂಪು ಬೆನ್ನಟ್ಟಿದ್ದರಿಂದ ಹೆದರಿದ ಬಾಲಕಿ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಮಂಗಳವಾರ ನಡೆದಿದೆ.

ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಮಾರ್ಗ ಮಧ್ಯೆದಲ್ಲೇ ಸಾವಿಗೀಡಾಗಿರುವ ಬಗ್ಗೆ ವೈದ್ಯರು ದೃಢಪಡಿಸಿದರು. ಬಾಲಕಿಯ ಹೆಸರು ತಿಳಿದುಬಂದಿಲ್ಲ.

ಮಜಾಫರ್​ನಗರ ಏರಿಯಾದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಕಳೆದ ವರ್ಷ ನಾಲ್ಕು ತಿಂಗಳ ಮಗುವನ್ನು ಕೊಂದಿತ್ತು. ಮಹಡಿಯ ಮೇಲಿದ್ದ ಕಲ್ಲೊಂದನ್ನು ತೆಗೆದುಕೊಂಡು ಕೆಳಗಿದ್ದ ಮಗುವಿನ ಮೇಲೆ ಎತ್ತಿಹಾಕಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು ಅಷ್ಟರಲ್ಲಾಗಲೇ ಪ್ರಾಣ ಹೋಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಷ್ಟೇ ಅಲ್ಲದೆ, ಕಟ್ಟಡ ಒಂದು ಭಾಗ ಕುಸಿದು ಆಗ್ರಾದ ಇಬ್ಬರು ಸಾವಿಗೆ ಇದೇ ಮಂಗಗಳು ಕಾರಣವಾಗಿದ್ದವು. ಮನೆಯ ಮಾಲೀಕ ಲಕ್ಷ್ಮಣ್​ ತುಳಿಸೈನಿ ಮತ್ತು ಕಾರ್ಮಿಕ ವೀರಾ ಮೃತಪಟ್ಟಿದ್ದರು. ಇಬ್ಬರು ಸಹ ಕಟ್ಟಡ ವೀಕ್ಷಣೆಗೆಂದು ನಿರ್ಮಾಣ ಹಂತದ ಕಟ್ಟಡದ ಬಳಿ ಬಂದಿದ್ದರು. ಎರಡನೇ ಪ್ಲೋರ್​ನಲ್ಲಿ ಇಬ್ಬರು ನಿಂತಿದ್ದರು. ಈ ವೇಳೆ ಮೂರನೇ ಫ್ಲೋರ್​ನಲ್ಲಿ ಇದ್ದಕ್ಕಿದ್ದಂತೆ 35 ಮಂಗಗಳ ನಡುವೆ ಜಗಳ ಉಂಟಾಗಿ ಕಟ್ಟಡದ ಒಂದು ಗೋಡೆ ಕುಸಿದು ಇಬ್ಬರು ದುರ್ಮರಣ ಹೊಂದಿದ್ದರು.

ಸಾಕಷ್ಟು ಜನರು ಮಂಗಗಳಿಂದ ಉಂಟಾದ ಹಾನಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮಂಗಗಳ ಉಪಟಳವನ್ನು ತಡೆಯಬೇಕೆಂಬ ಒತ್ತಾಯ ಸ್ಥಳೀಯ ಜನರಲ್ಲಿ ಕೇಳಿಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net