ಭಾರತದ ಮುಖ್ಯ ನ್ಯಾಯಮೂರ್ತಿ ಆಗಬೇಕೆಂಬ ಇಂಗಿತ; ಬಾಲಕಿಯ ಕನಸಿಗೆ ಪ್ರಧಾನಿಯ ಸಲಹೆ ಹೀಗಿದೆ…

Modi with student
Published on

ಇಂದೋರ್​: ಮಧ್ಯಪ್ರದೇಶದ ಇಂದೋರ್ ಮೂಲದ ಬಾಲಕಿ ತನಿಷ್ಕಾ ಸುಜಿತ್​ 15ನೇ ವಯಸ್ಸಿಗೆ ಬ್ಯಾಚುಲರ್​ ಆಫ್​ ಆರ್ಟ್ಸ್​​(BA) ಅಂತಿಮ ವರ್ಷದ ಪರೀಕ್ಷೆ ಬರೆಯಲು ಸಿದ್ದತೆ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಲಹೆ ಪಡೆದಿದ್ದಾಳೆ.

ಈ ವೇಳೆ ಬಾಲಕಿ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ(CJI) ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಲಹೆ ಪಡೆದಿದ್ಧಾಳೆ.

ಪಿತೃ ವಿಯೋಗ

2020ರಲ್ಲಿ ಕೋವಿಡ್​ನಿಂದಾಗಿ ತಂದೆ ಹಾಗೂ ತಾತನನ್ನು ಕಳೆದುಕೊಂಡ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವಾನ ಹೇಳಿದ್ದು ತಾನು ಅಂದುಕೊಂಡಿರುವ ದಾರಿಯಲ್ಲಿ ನಡೆಯುವಂತೆ ಪ್ರೋತ್ಸಾಹಿಸಿದರು ಎಂದು ಬಾಲಕಿ ನೆನಪಿಸಿಕೊಂಡಿದ್ದಾಳೆ.

ಇಂದೋರ್​ನ ಪ್ರತಿಷ್ಠಿತ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಐಆದ ತನಿಷ್ಕಾ ಏಪ್ರಿಲ್​ 19ರಿಂದ 28ರವರೆಗೆ ನಡೆಯುವ BA(Psychology) ಪರೀಕ್ಷೆ ಬರೆಯಲಿದ್ದಾರೆ.

ವಿದೇಶದಲ್ಲಿ ವ್ಯಾಸಂಗ ಮಾಡುವ ಆಸೆ

ತಾನು BA ಪರೀಕ್ಷೆಯಲ್ಲಿ ಉತ್ತೀರ್ಣಳಾದ ನಂತರ USನಲ್ಲಿ ಕಾನೂನು ವ್ಯಾಸಂಗ ಮುಗಿಸಿಭಾರತದ ಮುಖ್ಯ ನ್ಯಾಯಮೂರ್ತಿ ಆಗಿ ಕಾರ್ಯ ನಿರ್ವಹಿಸಬೇಕೆಂಬ ಆಸೆಯನ್ನು ಬಾಲಕಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ವ್ಯಕ್ತಪಡಿಸಿದ್ದಾಳೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂ ಕೋರ್ಟ್​ಗೆ ಹೋಗಿ ವಕೀಲರು ವಾದ ಮಂಡಿಸುವುದನ್ನು ನೋಡು ಇದು ನಿನಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕುರಿತು ಬಾಲಕಿ ಸಂತಸ ವ್ಯಕ್ತಪಡಿಸಿದ್ಧಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net