

ಗುರುಗ್ರಾಮ: ಇಲ್ಲಿಯ ಸುಶಾಂತ್ ಲೋಕ್ 1 ರಲ್ಲಿ ಭಾರತೀಯ ಮೂಲದ ಬ್ರಿಟಿಷ್ ನಿವಾಸಿಯೊಬ್ಬನಿಗೆ 12 ಹುಡುಗರು ಕಿರುಕುಳ ನೀಡಿದ್ದು, ಘಟನೆ ಕುರಿತಂತೆ ದೂರು ದಾಖಲಿಸಲಾಗಿದೆ.
ಜುಲೈ 23 ರಂದು ಹುಟ್ಟುಹಬ್ಬವೊಂದರ ಆಚರಣೆ ನಂತರ ನಂತರ ಹುಡುಗನಿಗೆ ಆರೋಪಿಗಳು ಕಿರುಕುಳ ನೀಡಿದ್ದರು.
ಹಲ್ಲೆ ನಡೆದ ಬಗ್ಗೆ ಆತ ತನ್ನ ಕುಟುಂಬಕ್ಕೆ ಹೇಳಿದ ನಂತರ ಅವರು ಪೊಲೀಸರನ್ನು ಸಂಪರ್ಕಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ. ಹುಡುಗನ ತಾಯಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಘಟನೆಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳುವುದೆಂದರೆ ಇದೇ ಇರಬಹುದೆ?
ಜುಲೈ 23 ರಂದು, ಯುವಕ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡು ಹಿಂದಿರುಗುವಾಗ, 12 ಹುಡುಗರ ಗುಂಪು ಅವನ ಮೇಲೆ ಹಲ್ಲೆ ಮಾಡಿತು. ಆರೋಪಿಗಳು ಹುಡುಗನನ್ನು ಮೂಲೆಗೆ ಹಾಕಿ ಒಬ್ಬಾತನಿಗೆ ಕ್ಷಮೆಯಾಚಿಸುವಂತೆ ಕೇಳಲಾರಂಭಿಸಿದರು.
ಘಟನೆಯ ವೀಡಿಯೊದಲ್ಲಿ, ಆರೋಪಿ ಹುಡುಗನನ್ನು ತನ್ನ ಟಿ-ಶರ್ಟ್ ಹರಿದು ಹಾಕಿದ್ದರಿಂದ ಕ್ಷಮೆ ಯಾಚಿಸುವಂತೆ ಹೇಳುತ್ತಿರುವ ದೃಶ್ಯವಿದೆ. ಕ್ಷಮೆಯಾಚಿಸಿದ ನಂತರ ಆರೋಪಿ ಆತನನ್ನು ಹೊಡೆದ. ಕ್ಷಮೆಯಾಚನೆಯನ್ನು ಪುನರಾವರ್ತಿಸುವಂತೆ ಮಾಡಿದ. ಆರೋಪಿಗಳು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ದಾಖಲಿಸಿದ್ದಾರೆ.
ಅವನ ಟೀ ಶರ್ಟ್ ಹರಿದು ಹೋಗಿರುವುದನ್ನು ಹುಡುಗನ ಕುಟುಂಬ ಗಮನಿಸಿ ಆ ಬಗ್ಗೆ ಕೇಳಿದಾಗ, ಪಾರ್ಟಿಯಲ್ಲಿ ನಡೆದ ಘಟನೆಯನ್ನು ಹೇಳಿದ್ದಾನೆ. ಶನಿವಾರ, ಆತನ ತಾಯಿ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವಿವರಿಸಿದ್ದಾರೆ.
"ಯುವಕರ ಗುಂಪು ಜುಲೈ 17 ರಂದು ಸುಶಾಂತ್ ಲೋಕ್ನ ಪೀಚ್ ಟ್ರೀಯಲ್ಲಿ ನನ್ನ 17 ವರ್ಷದ ಮಗನನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಲ್ಲೆ ಮಾಡಿ ಹಿಂಸಿಸಿದೆ. ನನ್ನ ಮಗ ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಅಥವಾ ಜಗಳವಾಡಲಿಲ್ಲ ಅಥವಾ ಯಾರನ್ನೂ ಕರೆಯಲು ಪ್ರಯತ್ನಿಸಲಿಲ್ಲ ಅವನ ಜೀವವು ಅಪಾಯದಲ್ಲಿದೆ ಎಂದು ಅವನಿಗೆ ತಿಳಿದಿತ್ತು'' ಎಂದು ಆತನ ತಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಘಟನೆಯ ನಂತರ, ಹುಡುಗ ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ. ಆತನ ಕುಟುಂಬ ಪೊಲೀಸರನ್ನು ಸಂಪರ್ಕಿಸಿದ ನಂತರ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಯಿತು. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.