More

    ಚಂದ್ರನಂಗಳದ ಕುಳಿಗೆ ಸಾರಾಭಾಯ್ ಹೆಸರು

    ನವದೆಹಲಿ: ಚಂದ್ರಯಾನ-2 ಗಗನನೌಕೆಯ ಆರ್ಬಿಟರ್ ಪರಿಶೋಧಿಸಿರುವ ಚಂದ್ರನ ಅಂಗಳದ ಕುಳಿಗೆ (ಕ್ರೇಟರ್) ಹೆಸರಾಂತ ಖಭೌತ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರ ಹೆಸರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇರಿಸಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಪಿತಾಮಹ ಎಂದೇ ಖ್ಯಾತರಾದ ಸಾರಾಭಾಯ್ ಅವರ ಜನ್ಮ ಶತಮಾನೋತ್ಸವ ಆಗಸ್ಟ್ 12ಕ್ಕೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇಸ್ರೊ ಈ ಗೌರವ ಸಲ್ಲಿಸಿದೆ. ಆರ್ಬಿಟರ್ ಚಂದ್ರನಂಗಳದ ಕುಳಿಗಳ ಚಿತ್ರವನ್ನು ಹಿಂದೆಯೇ ರವಾನಿಸಿತ್ತು.

    ಅಮೆರಿಕದ ಅಪೊಲೋ-17 ಮತ್ತು ರಷ್ಯಾದ ಲೂನಾ-21 ಲ್ಯಾಂಡರ್​ಗಳು ಚಂದ್ರನ ಮೇಲೈನಲ್ಲಿ ಇಳಿದಿದ್ದ ಸ್ಥಳದಿಂದ 250ರಿಂದ 300 ಕಿ.ಮೀ ದೂರದಲ್ಲಿ ‘ವಿಕ್ರಮ್ ಸಾರಾಭಾಯ್ ಕುಳಿ’ ಇದೆ. ಚಂದ್ರಯಾನ-2 ಟೆರಾಯ್್ನ ಮ್ಯಾಪಿಂಗ್ ಕ್ಯಾಮೆರಾಗಳ ಮೂಲಕ ಈ ಕುಳಿಯ 3ಡಿ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ ಎಂದು ಇಸ್ರೊ ತಿಳಿಸಿದೆ. ಈ ಕುಳಿ 1.70 ಕಿ.ಮೀ ಆಳ ಹೊಂದಿದ್ದು, ಅದರ ಇಳಿಜಾರು 25ರಿಂದ 35 ಡಿಗ್ರಿಗಳಷ್ಟಿದೆ. ಲಾವಾ ತುಂಬಿದ ಚಂದ್ರನ ಮೇಲ್ಮೆ ಪ್ರದೇಶವನ್ನು ಮತ್ತಷ್ಟು ಅಧ್ಯಯನ ಮಾಡಲು ಈ ಕುಳಿಗಳು ಸಹಾಯ ಮಾಡುತ್ತವೆ. ಇದನ್ನೂ ಓದಿ: ಉಗ್ರವಾದಕ್ಕೆ ಮಟ್ಟ, ಅಕ್ರಮಣಶೀಲತೆಗೆ ಕಡಿವಾಣ; ಮೋದಿ ಪರೋಕ್ಷ ಎಚ್ಚರಿಕೆ ಯಾರಿಗೆ?

    2019ರ ಜುಲೈ 22ರಂದು ಉಡಾವಣೆಯಾದ ಚಂದ್ರಯಾನ-2 ಗಗನನೌಕೆಯು ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಇಳಿಯುವಾಗ ಅಪ್ಪಳಿಸಿ ವಿಫಲವಾದರೂ ಆರ್ಬಿಟರ್ ಸುಸ್ಥಿಯಲ್ಲಿದ್ದು, ಕಾರ್ಯನಿರ್ವಹಿಸುತ್ತಿದೆ. ಅಮೂಲ್ಯವಾದ ವೈಜ್ಞಾನಿಕ ದತ್ತಾಂಶವನ್ನು ಒದಗಿಸುತ್ತಿದೆ.
    ಕೋಟ್

    ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರವಾಗಿಸಿರುವ ಇಸ್ರೊದ ಇತ್ತೀಚಿನ ಸಾಧನೆಗಳು ಸಾರಾಭಾಯ್ ಅವರ ಕನಸನ್ನು ನನಸಾಗಿಸುತ್ತದೆ
    | ಜಿತೇಂದ್ರ ಸಿಂಗ್  ಪ್ರಧಾನಿಮಂತ್ರಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ

    ಮತ್ತೆ ಸಂಪೂರ್ಣ ಲಾಕ್​ಡೌನ್​; ತುರ್ತು ಸಂಪುಟ ಸಭೆಯಲ್ಲಿ ನಿರ್ಣಯ; ಆಗಸ್ಟ್​ 31ರವರೆಗೆ ನಿರ್ಬಂಧ ವಿಧಿಸಿದ್ದೆಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts