More

    ಮತ್ತೆ ಸಂಪೂರ್ಣ ಲಾಕ್​ಡೌನ್​; ತುರ್ತು ಸಂಪುಟ ಸಭೆಯಲ್ಲಿ ನಿರ್ಣಯ; ಆಗಸ್ಟ್​ 31ರವರೆಗೆ ನಿರ್ಬಂಧ ವಿಧಿಸಿದ್ದೆಲ್ಲಿ?

    ನವದೆಹಲಿ: ಕರೊನಾ ನಿಯಂತ್ರಣಕ್ಕೆ ಹಲವು ರಾಜ್ಯಗಳು ಸಂಕಷ್ಟ ಪಡುತ್ತಲೇ ಇವೆ. ಕನಿಷ್ಠ 10 ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜತೆಗೆ, ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ ಬೇರೆ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ಏರಿಕೆ ಕಾಣುತ್ತಿದೆ.

    ಕೆಲ ದಿನಗಳಿಂದ ವಿಶ್ವಾಸ ಮತ ಯಾಚನೆ, ಶಾಸಕರ ರಾಜೀನಾಮೆ, ಅನರ್ಹತೆ ಸೇರಿ ಹಲವು ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಸಿಎಂ ಎನ್​. ಬಿರೇನ್​ ಸಿಂಗ್​ ತುರ್ತು ಸಂಪುಟ ಸಭೆ ನಡೆಸಿದ್ದಾರೆ. ಆದರೆ, ಇದು ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದ್ದಾಗಿರದೇ, ಕೋವಿಡ್​ಗೆ ಸಂಬಂಧಿಸಿದ್ದಾಗಿತ್ತು. ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಲಾಕ್​ಡೌನ್​ ಜಾರಿಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

    ಇದನ್ನೂ ಓದಿ; ಮಗ ಬಿಜೆಪಿ ಸೇರಿದರೆ ಏನ್ಮಾಡ್ತೀರಾ? ಕಾಂಗ್ರೆಸ್​ ಹಿರಿಯ ಮುಖಂಡ, ಮಾಜಿ ಸಿಎಂ ದಿಗ್ವಿಜಯ್​ ಉತ್ತರವೇನು ಗೊತ್ತೆ?

    ರಾಜ್ಯಾದ್ಯಂತ ಆಗಸ್ಟ್​ 31ರವರೆಗೆ ಮತ್ತೆ ಲಾಕ್​ಡೌನ್​ ಮುಂದುವರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಒಟ್ಟಾರೆ ಈಶಾನ್ಯ ರಾಜ್ಯಗಳಲ್ಲಿ ಒಟ್ಟಾರೆ 75,000ಕ್ಕೂ ಅಧಿಕ ಕೋವಿಡ್​ ಪ್ರಕರಣಗಳು ವರದಿಯಾಗಿವೆ.

    ಈ ಪೈಕಿ ಆಸ್ಸಾಂನಲ್ಲಿಯೇ 57,714 ಪ್ರಕರಣಗಳಿವೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರೀಯ ಸಶಸ್ತ್ರ ಪಡೆಗಳ 3,800ಕ್ಕೂ ಅಧಿಕ ಸಿಬ್ಬಂದಿಯಲ್ಲಿ ಕೋವಿಡ್​ ಕಾಣಿಸಿಕೊಂಡಿದೆ. ಈ ಸಿಬ್ಬಂದಿ ಎಲ್ಲ ರಾಜ್ಯಗಳಲ್ಲೂ ಹರಡಿಕೊಂಡಿದ್ದಾರೆ ಇದು ಹೊಸ ಆತಂಕವನ್ನೇ ಸೃಷ್ಟಿಸಿದೆ. ಈ ಪೈಕಿ ಮಣಿಪುರದಲ್ಲಿ 823 ಸಿಬ್ಬಂದಿಯಿದ್ದು, ರಾಜ್ಯದಲ್ಲಿ 1,800ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.

    ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts