More

    ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

    ನವದೆಹಲಿ: ಮಹಿಳೆಯರ ಮದುವೆಯ ಕನಿಷ್ಠ ವಯಸ್ಸು ಕುರಿತು ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಮಹತ್ವದ ನಿರ್ಧಾರ ಘೋಷಿಸುವ ಸುಳಿವನ್ನು ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನೀಡಿದ್ದಾರೆ.

    ಮದುವೆಗೆ ಮಹಿಳೆಯರ ಕನಿಷ್ಠ ವಯಸ್ಸನ್ನು ಮರು ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಸಮಿತಿ ವರದಿ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಮೋದಿ ಭಾಷಣದಲ್ಲಿ ತಿಳಿಸಿದ್ದಾರೆ.

    ಅಷ್ಟಕ್ಕೂ ಏನಿದು ಕನಿಷ್ಠ ವಯಸ್ಸು? ಏಕೆ ಮರು ಪರಿಶೀಲನೆ ಎನ್ನುವುದನ್ನು ನೋಡುವುದಾದರೆ..! ಭಾರತದಲ್ಲಿ ಸದ್ಯ ಮದುವೆಯಾಗಬಯಸುವ ಮಹಿಳೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಪುರುಷರಿಗೆ ಕನಿಷ್ಠ 21 ಆಗಿರಬೇಕು ಎಂಬ ಕಾನೂನಿದೆ. ಈ ಕಾಯ್ದೆ 1978ರಿಂದ ಜಾರಿಯಲ್ಲಿದೆ. ಅದಕ್ಕೂ ಮುನ್ನ ಮಹಿಳೆಗೆ 15 ವರ್ಷ ಆಗಿದ್ದರೆ ಮದುವೆ ಮಾಡಬಹುದಾಗಿತ್ತು.

    ಇದನ್ನೂ ಓದಿ; ಕೇಂದ್ರ ಸರ್ಕಾರವೇ ವಿತರಿಸಲಿದೆ ಕರೊನಾ ಲಸಿಕೆ; ಸಾರ್ವಜನಿಕರಿಗೆ ಬೇಕಿಲ್ಲ ಆತಂಕ 

    ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಇದರಲ್ಲಿ ನೀತಿ ಆಯೋಗದ ಆರೋಗ್ಯ ಸದಸ್ಯ ಡಾ. ವಿನೋದ್​ ಪೌಲ್​, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಇದರ ಸದಸ್ಯರಾಗಿದ್ದಾರೆ.

    ಮಹಿಳೆಯರ ಮದುವೆಯ ಕನಿಷ್ಠ ವಯಸ್ಸಿನ ಪರಾಮರ್ಶೆ ಹಾಗೂ ತಾಯಿಯ ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ ಈ ಸಮಿತಿ ಅಧ್ಯಯನ ಮಾಡಿದೆ. ತಾಯ್ತನ, ಆರೋಗ್ಯ, ಜನನ ಪೂರ್ವ ಹಾಗೂ ಜನನದ ನಂತರ ಮಗು ಮತ್ತು ತಾಯಿಯ ಪೌಷ್ಠಿಕತೆ ವಿಚಾರವನ್ನು ಇದಕ್ಕೆ ಪರಿಗಣಿಸಿದೆ. ಜತೆಗೆ, ಮಹಿಳೆಯರನ್ನು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಶಿಫಾರಸು ಮಾಡಿದೆ.

    ಇದನ್ನೂ ಓದಿ; ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು? 

    ಸದ್ಯ,ಈ ಸಮಿತಿಯು ಮಹಿಳೆಯರ ಮದುವೆಯ ವಯಸ್ಸನ್ನು 21ಕ್ಕೆ ಏರಿಸುವ ಪ್ರಸ್ತಾವನೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಸಿದೆ ಎಂದು ಹೇಳಲಾಗಿದೆ. ಇದನ್ನೇ ಕೇಂದ್ರ ಸರ್ಕಾರವೂ ಕೂಡ ಪರಿಗಣಿಸುವ ಸಾಧ್ಯತೆಯಿದ್ದು, ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದೆ. ನಂತರ ಇದು ಕಾನೂನು ರೂಪ ಪಡೆಯಲಿದೆ.

    ಬದಲಾಗುತ್ತಿರುವ ಭಾರತದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಲಭ್ಯವಾಗುತ್ತಿವೆ. ಉನ್ನತ ಶಿಕ್ಷಣ ದೊರೆಯುತ್ತಿದೆ. ತಾಯಂದಿರ ಮರಣದ ಪ್ರಮಾಣ ಕಡಿಮೆಗೊಳಿಸುವುದು ಹಾಗೂ ಪೌಷ್ಠಿಕ ಆಹಾರ ದೊರೆಯುವಂತೆ ನೋಡಿಕೊಳ್ಳುವುದು ಕಡ್ಡಾಯವಾಗುತ್ತಿದೆ. ಈ ಎಲ್ಲ ವಿಚಾರದಲ್ಲಿಟ್ಟುಕೊಂಡು ಮಹಿಳೆಯರ ಮದುವೆ ವಯಸ್ಸು ಹೆಚ್ಚಿಸುವ ಅಂಶ ಪರಿಗಣಿಸಲಾಗುತ್ತಿದೆ.

    ಪ್ರಧಾನಿ ಮೋದಿ ಹೇಳಿದ ಮೂರು ದೇಶೀಯ ಕರೊನಾ ಲಸಿಕೆಗಳಾವವು? ಇಲ್ಲಿದೆ ಮಾಹಿತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts