More

    ಕಲಾವಿದರಿಗೆ ಬೆಲೆ ಕೊಟ್ಟವರು ಇಳಕಲ್ಲ ಜನತೆ

    ಇಳಕಲ್ಲ: ನಗರದ ಬಸವೇಶ್ವರ ವೃತ್ತ ಸಮೀಪದ ಖಾಲಿ ಜಾಗದಲ್ಲಿ ಹಾಕಿರುವ ಟೆಂಟ್‌ನಲ್ಲಿ ಗುರುವಾರ ಸಂಜೆ ‘ಹೆಂಡತಿನ ಕೇಳಿ ಮದುವೆಯಾಗು’ ನಾಟಕ ಪ್ರದರ್ಶನ ಆರಂಭಗೊಂಡಿತು.

    ಇಳಕಲ್ಲದ ಗುರುಮಹಾಂತ ಶ್ರೀಗಳು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಇಳಕಲ್ಲ ನಗರಕ್ಕೆ 45 ವರ್ಷಗಳ ಬಳಿಕ ಕೆಬಿಆರ್ ಡ್ರಾಮಾ ಕಂಪನಿ ವತಿಯಿಂದ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇಳಕಲ್ಲದ ಜನತೆಗೆ ಕಲಾವಿದರೆಂದರೆ ಎಲ್ಲಿಲ್ಲದ ಅಭಿಮಾನ. ನಾಟಕ ವೀಕ್ಷಿಸುವ ಮೂಲಕ ಕಲಾವಿದರನ್ನು ಬೆಳೆಸುತ್ತಾರೆ ಎಂದರು.

    ಸಜ್ಜನ ಮಹೇಶಪ್ಪ, ಹಿರಿಯ ಕಲಾವಿದರಾದ ಕೆ. ಎ. ಬನ್ನಟಿ, ಮಹಾಂತೇಶ ಗಜೇಂದ್ರಗಡ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಂಗಣ್ಣ ಗದ್ದಿ, ರಾಮನಗೌಡ ಸಂದಿಮನಿ, ಮುರ್ತುಜಾ ಚಳಗೇರಿ, ಚಿಂದೋಡಿ ಬಂಗಾರೇಶ, ಚಿಂದೋಡಿ ವಿಜಯಕುಮಾರ ಹಾಗೂ ಇಳಕಲ್ಲ ನಗರದ ಕಲಾವಿದರು, ರಂಗಕರ್ಮಿಗಳು, ಕಲಾ ಅಭಿಮಾನಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts