ಇದು ಅಂತರಂಗದ ವಿಚಾರ| ತಂತ್ರಶಾಸ್ತ್ರ ದರ್ಶನ

Antaranga vvani
Published on

ತಾಂತ್ರಿಕ ವಿಷಯಗಳ ಸಂಕ್ಷಿಪ್ತ ವಿವರಣೆ: ವಿಧವಿಧವಾದ ಆಗಮಗಳು ಮತ್ತು ತಂತ್ರಗಳು ಇರುವುದುದಾದರೂ, ಅವುಗಳಲ್ಲಿ ಕೆಲವು ಸಾಮಾನ್ಯ ಗುಣಧರ್ಮಗಳನ್ನು ಕಾಣಬಹುದು. ತಾವು ವೇದಗಳಿಗೆ ಸೇರಿದ್ದು, ಅವುಗಳನ್ನು ಈಗಿನ ಯುಗಧರ್ಮಕ್ಕೆ ತಕ್ಕಂತೆ ವ್ಯಾಖ್ಯಾನ ಮಾಡಿರುವುದಾಗಿ ಅವು ಸಾರಿವೆ. ಅದು ಹೇಗೆಯೇ ಇರಲಿ, ತಂತ್ರಗಳ ಅಭ್ಯಾಸಕ್ಕೆ ಜಾತಿ, ಲಿಂಗಭೇದವಿಲ್ಲದೆ ಎಲ್ಲರಿಗೂ ಮುಕ್ತದ್ವಾರವಿದೆ.

ತಂತ್ರಗಳು ರ್ಚಚಿಸಿರುವ ವಿಷಯಗಳನ್ನು ನಾಲ್ಕು ಪಾದಗಳಾಗಿ ವಿಭಾಗಿಸಿದ್ದಾರೆ. ಜ್ಞಾನಪಾದ, ಯೋಗಪಾದ, ಕ್ರಿಯಾಪದ ಮತ್ತು ಚರ್ಯಾಪಾದ - ಇವೇ ಆ ನಾಲ್ಕು ಪಾದಗಳು.

ಜ್ಞಾನಪಾದ: ಜ್ಞಾನಪಾದವು, ತಂತ್ರಗಳು ಯಾವ ತತ್ತ್ವದ ಅಥವಾ ದರ್ಶನದ ಮೇಲೆ ನಿಂತಿವೆ ಎಂಬುದನ್ನು ವಿವರಿಸುತ್ತದೆ. ಆ ತತ್ತ್ವವು, ವೇದಾಂತದ ಹಾಗೂ ಸಾಂಖ್ಯದರ್ಶನದ ಸೂತ್ರಗಳ ಸಂಯೋಜನೆಯಾಗಿದೆ.

ಯೋಗಪಾದ: ಯೋಗಪಾದವು, ಜೀವನದ ಪರಮ ಗುರಿಯಾದ ಪರಮಾತ್ಮನೊಡನೆ ಐಕ್ಯವನ್ನು ಸಾಧಿಸಲು ಮುಮುಕ್ಷುವು ಅನುಸರಿಸಬೇಕಾದ ಸಾಧನೆ, ಆಧ್ಯಾತ್ಮಿಕ ಶಿಸ್ತು ಸಂಯಮ - ಇವುಗಳನ್ನು ಕುರಿತು ವಿವರಗಳನ್ನು ನೀಡುತ್ತದೆ.

ಕ್ರಿಯಾಪಾದ: ವ್ಯಕ್ತಿಯೊಬ್ಬನು ಸಮಾಜದ ಒಂದು ಭಾಗವಾಗಿರುತ್ತಾನೆ. ಅವರ ಆಧ್ಯಾತ್ಮಿಕ ಮುನ್ನಡೆ ಸಮಾಜದ ಮುನ್ನಡೆಯೊಂದಿಗೆ ಅತಿ ನಿಕಟ ಸಂಪರ್ಕ ಹೊಂದಿರುತ್ತದೆ. ಆದುದರಿಂದ ತಂತ್ರಗಳು ಸಮಾಜಕ್ಕೂ ಒಂದು ಧರ್ಮವನ್ನು, ಸಾಗಬೇಕಾದ ಜೀವನಪಥವನ್ನು ಕೊಟ್ಟು, ವ್ಯಕ್ತಿಯೂ, ಸಮಾಜವೂ, ಒಂದಕ್ಕೊಂದು ವಿರಸವಿಲ್ಲದೆ, ಸಾಮರಸ್ಯದಿಂದ ವಿಕಾಸ ಹೊಂದಲು ಅವಕಾಶ ಮಾಡಿಕೊಟ್ಟಿವೆ.

ಈ ದಿಕ್ಕಿನಲ್ಲಿ, ತಂತ್ರಗಳು, ದೇವಾಲಯದಲ್ಲಿ ನಡೆಯುವ ಪೂಜೆಯಂತೆ ಸಾಮೂಹಿಕ ಅರ್ಚನೆಗೂ, ಯಜ್ಞಯಾಗಾದಿಗಳಿಗೂ, ತೀರ್ಥಯಾತ್ರೆಗೂ ವ್ಯವಸ್ಥೆ ಮಾಡಿಕೊಟ್ಟಿವೆ. ಮೂರನೆಯ ಪಾದವಾದ ಕ್ರಿಯಾಪದದಲ್ಲಿ ಈ ವಿವರಗಳನ್ನೆಲ್ಲ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net