

ಕೇರಳ; ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು (23) ದೋಹಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ಒಂದೆರಡು ಗಂಟೆಗಳ ನಂತರ ವಾಪಸ್ ಆಗಿದೆ.
ಪೈಲಟ್‌ಗಳು ಮತ್ತು ಸಿಬ್ಬಂದಿ ಸೇರಿದಂತೆ 188 ಪ್ರಯಾಣಿಕರನ್ನು ಹೊಂದಿದ್ದ ವಿಮಾನ IX 375, ಕ್ಯಾಲಿಕಟ್‌ನಿಂದ ಬೆಳಗ್ಗೆ 9.07 ರ ಸುಮಾರಿಗೆ ಹೊರಟಿದೆ. ಆದರೆ ಎರಡು ಗಂಟೆಗಳ ಬಳಿಕ ಬೆಳಗ್ಗೆ 11.12 ರ ವರೆಗೂ ಆಕಾಶದಲ್ಲಿ ಹಾರಾಡಿ ಮತ್ತೆ ವಿಮಾನ ನಿಲ್ದಾಣಕ್ಕೆ ಮರಳಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದ ಕ್ಯಾಬಿನ್ ಎಸಿಯಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಇತ್ತು ಎಂದಿದ್ದಾರೆ.
(ಏಜೆನ್ಸೀಸ್)
ತಾಂತ್ರಿಕ ಸಮಸ್ಯೆಯಿಂದಾಗಿ ನಮ್ಮ ಒಂದು ವಿಮಾನವು ಟೇಕ್ ಆಫ್ ಆದ ನಂತರ ಕೇರಳದ ಕೋಝಿಕ್ಕೋಡ್‌ಗೆ ಹಿಂತಿರುಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ. ನಾವು ಆದ್ಯತೆಯ ಮೇರೆಗೆ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಿದ್ದೇವೆ, ವಿಳಂಬದ ಸಮಯದಲ್ಲಿ ಅತಿಥಿಗಳಿಗೆ ಉಪಹಾರಗಳನ್ನು ಒದಗಿಸಿದ್ದೇವೆ ಮತ್ತು ವಿಮಾನವು ಸ್ಥಳದಿಂದ ಹೊರಟಿದೆ ಎಂದು ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ ಮತ್ತು ಪ್ರಯಾಣಿಕರನ್ನು ಅತ್ಯಂತ ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.