

ದೆಹಲಿ: ಇಂದು(ನ.15) ಮಧ್ಯಾಹ್ನ ಜಾರ್ಖಂಡ್ನ ದಿಯೋಘರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಎರಡು ಗಂಟೆಗಳ ಬಳಿಕ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಬಂದಿಳಿದ್ದಾರೆ ಎಂದು ವರದಿಯಾಗಿದೆ.
ಟೆಕ್ ಆಫ್ ಆಗಬೇಕಿದ್ದ ವಿಮಾನದಲ್ಲಿ ಪ್ರಧಾನಿ ಮೋದಿ ಕುಳಿತುಕೊಂಡಿದ್ದರು. ತಾಂತ್ರಿಕ ದೋಷದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ದಿಯೋಘರ್ನಲ್ಲಿ ವಿಮಾನವನ್ನು ನಿಲ್ಲಿಸಲು ನಿರ್ಧರಿಸಲಾಯಿತು. ವಾಯುಪಡೆ ವಿಮಾನ ಬರುವ ಮುನ್ನ ವಿಮಾನದಲ್ಲಿನ ದೋಷವನ್ನು ಸರಿಪಡಿಸುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬುಡಕಟ್ಟು ಜನಾಂಗದ ಪ್ರತಿನಿಧಿ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ ಮತ್ತು ನ.20ರಂದು ಜಾರ್ಖಂಡ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಪ್ರಚಾರ ಸಭೆಗಳನ್ನು ಉದ್ದೇಶಿ ಮಾತನಾಡಲು ಇಲ್ಲಿಗೆ ಬಂದಿದ್ದರು.
ಕಾಂಗ್ರೆಸ್ ಟೀಕೆ
ಚುನಾವಣೆ ಅಂಗವಾಗಿ ಇಂದು ಪ್ರಚಾರ ಸಭೆಗೆ ಭಾಗವಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಾರ್ಖಂಡ್ಗೆ ತೆರಳಿದ್ದರು. ಪ್ರಧಾನಿ ಮೋದಿ ವಿಮಾನ ತಾಂತ್ರಿಕ ದೋಷ ಹಿನ್ನೆಲೆ, ಏರ್ ಟ್ರಾಫಿಕ್ ಕಂಟ್ರೋಲ್ನಿಂದ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ 45 ನಿಮಿಷಗಳ ಕಾಲ ಟೇಕ್ ಆಫ್ಗೆ ಅನುಮತಿ ಕೊಟ್ಟಿಲ್ಲ. ಇದು ವಿರೋಧ ಪಕ್ಷದ ನಾಯಕರ ಪ್ರಚಾರವನ್ನು ಅಡ್ಡಿಪಡಿಸುವ ಉದ್ದೇಶದಿಂದ ತಾಂತ್ರಿಕ ದೋಷವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ,(ಏಜೆನ್ಸೀಸ್).