

ಎನ್.ಎಲ್. ಶಿವಮಾದು
ಬೆಂಗಳೂರು: ಕೇವಲ ಎರಡೂವರೆ ವರ್ಷದಲ್ಲಯೇ ಪಿಎಚ್.ಡಿ. ಪೂರ್ಣಗೊಳಿಸುವುದು, ನೆಟ್ ಅರ್ಹತೆ ಪಡೆದ ಅಭ್ಯರ್ಥಿಗಳು ವರ್ಷದ ಯಾವುದೇ ಸಮಯದಲ್ಲಿ ಪಿಎಚ್.ಡಿ.ಗೆ ಅರ್ಜಿ ಸಲ್ಲಿಸುವುದು ಸೇರಿ ಎಐಸಿಟಿಇಗೆ ಪಿಎಚ್.ಡಿ ಹೊಸ ಮಾರ್ಗಸೂಚಿಗಳನ್ನು ಶಿಾರಸು ಮಾಡಲಾಗಿದೆ.
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ನಿರ್ವಹಣೆ ಮತ್ತು ವಿನ್ಯಾಸದಂತಹ ತಾಂತ್ರಿಕ ಶಿಕ್ಷಣದಲ್ಲಿನ ಪಿಎಚ್.ಡಿ./ಡಿಎಸ್‌ಸಿ ಸಂಶೋಧಣೆಗೆ ಇದೇ ಮೊದಲ ಬಾರಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಇಲ್ಲಿಯವರೆಗೂ ಎಐಸಿಟಿಇ ಯುಜಿಸಿ ಮಾರ್ಗಸೂಚಿಯನ್ನು ಅನುಸರಿಸುತ್ತಿತ್ತು, ಆದರೆ, ತಾಂತ್ರಿಕ ಕೋರ್ಸ್‌ಗಳಿಗೆ ಅನ್ವಯವಾಗುವಂತೆ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಅಧ್ಯಕ್ಷತೆಯ ಸಮಿತಿಯು ಮೊದಲ ಬಾರಿಗೆ ಮಾರ್ಗಸೂಚಿ ಸಿದ್ಧಮಾಡಿ ಪ್ರಮುಖ ಶಿಾರಸುಗಳನ್ನು ಸೂಚಿಸಿದೆ.
ಪಿಎಚ್‌ಡಿ ಗೈಡ್‌ಲೈನ್ಸ್ ಮಾಡಿಕೊಡುವಂತೆ ಕಳೆದ ೆಬ್ರವರಿಯಲ್ಲಿ ಎಐಸಿಟಿಇ ಸಮಿತಿಯನ್ನು ರಚಿಸಿತ್ತು. ಅದರಂತೆ ಸಮಿತಯು ವರದಿಯನ್ನು ಎಐಸಿಟಿಇಗೆ ಸಲ್ಲಿಸಿದೆ.
ಮಾರ್ಗಸೂಚಿ ಉದ್ದೇಶವೇನು?
- ತಾಂತ್ರಿಕ ಶಿಕ್ಷಣದಲ್ಲಿ ಪಿಎಚ್.ಡಿ./ಡಿಎಸ್‌ಸಿಗೆ ಸಮಗ್ರ ಚೌಕಟ್ಟು ವಿನ್ಯಾಸಗೊಳಿಸುವುದು
- ಸಂಶೋಧನೆಯ ಗುಣಮಟ್ಟ, ಕಠಿಣತೆ ಮತ್ತು ಪ್ರಸ್ತುತತೆಯನ್ನು ಹೆಚ್ಚಿಸುವ ಪ್ರಮಾಣೀಕೃತ ಚೌಕಟ್ಟು ನಿರ್ಮಾಣ
- ಶೈಕ್ಷಣಿಕ ಮಾನದಂಡಗಳಲ್ಲಿ ಏಕರೂಪತೆ ಖಚಿತಪಡಿಸುವುದು,, ಜ್ಞಾನ ಮತ್ತು ಉದ್ಯಮಕ್ಕೆ ನವೀನ ಹಾಗೂ ಪ್ರಭಾವಶಾಲಿ ಕೊಡುಗೆಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ದೃಢವಾದ ಸಂಶೋಧನಾ ಪರಿಸರ ವ್ಯವಸ್ಥೆ ಬೆಳೆಸುವುದು
ಅರ್ಹತಾ ಮಾನದಂಡಗಳು - ಪಿಎಚ್.ಡಿ. ಪ್ರವೇಶಕ್ಕೆ ಸ್ಪಷ್ಟ ಚೌಕಟ್ಟನ್ನು ಪ್ರಸ್ತಾಪಿಸಿದೆ. ಪ್ರಾಥಮಿಕವಾಗಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ 4 ವರ್ಷ/8 ಸೆಮಿಸ್ಟರ್ ಪದವಿ ನಂತರ 2 ವರ್ಷ ಸ್ನಾತಕೋತ್ತರ ಪದವಿಯ ಶೇ.55 ಅಂಕಗಳು, ಪರಿಶಿಷ್ಟ ಜಾತಿ/ಪಂಗಡ, ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಶೇ.5 ಅಂಕಗಳ ಸಡಿಲಿಕೆ - ಸಂಶೋಧನಾ ಸಾಮರ್ಥ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿದೆ. - ನೆಟ್/ಸ್ಲೆಟ್, ಗೇಟ್ ಅಥವಾ ಇದಕ್ಕೆ ಸಮಾನವಾದ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಅರ್ಹತೆ ಪಡೆದಿರಬೇಕು
ಪಿಎಚ್.ಡಿ. ಪ್ರಬಂಧದ ತಯಾರಿಕೆ ಮತ್ತು ಸಲ್ಲಿಕೆಗೆ ಮಾರ್ಗಸೂಚಿಗಳನ್ನು ಒದಗಿಸಲಾಗಿದೆ. ಪ್ರಬಂಧ ರಚನೆ, ವಿಷಗಳ ಜೋಡಣೆ, ಉಲ್ಲೇಖಿಸುವ ಶೈಲಿ, ಕೃತಿಚೌರ್ಯದ ಪರಿಶೀಲನೆ ಮತ್ತು ಆನ್‌ಲೈನ್ ಸಲ್ಲಿಕೆಗೆ ಕಾರ್ಯವಿಧಾನಗಳ ಕುರಿತು ವಿವರವಾದ ವಿಶೇಷಣಗಳನ್ನು ನೀಡಲಾಗಿದೆ.
ಉನ್ನತ ಗುಣಮಟ್ಟ ಮತ್ತು ಪಾಂಡಿತ್ಯಪೂರ್ಣ ಸಮಗ್ರತೆಯನ್ನು ಖಚಿತಪಡಿಸುವ ಜತೆಗೆ ಪ್ರಬಂಧದ ಗಾತ್ರವು ಕನಿಷ್ಠ 100ರಿಂದ ಗರಿಷ್ಠ 400 ಪುಟಗಳನ್ನು ಹೊಂದಿರಬೇಕು.
ಅತ್ಯಾಧುನಿಕ ತಂತ್ರಜ್ಞಾನಗಳನ್ನು ಮುಂದುವರಿಸುವಲ್ಲಿ ಅಂತರ್‌ಶಿಸ್ತೀಯ, ಬಹುಶಿಸ್ತೀಯ, ಅಂತರ್‌ಶಿಸ್ತೀಯ, ವಿಭಾಗೀಯ ಸಹಯೋಗಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮಾರ್ಗಸೂಚಿಗಳಿಗೆ ಅನುಸಾರವಾಗಿದೆ. ಸಾಂತ್ರದಾಯಿಕ ಶೈಕ್ಷಣಿಕ ಗಡಿಗಳನ್ನು ಮೀರಿದ ಅಂತರ್‌ಶಿಸ್ತೀಯ ಸಂಶೋಧನೆಗಳನ್ನು ಬೆಳೆಸುವ ಜೋಡಣೆಗಳಿಗೆ ಆದ್ಯತೆ ನೀಡಲಾಗಿದೆ.
- ಯುಜಿಸಿ ನಿಯಮಗಳ ಪ್ರಕಾರ ನಿವೃತ್ತಿ ನಂತರ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಅರ್ಹತೆ ಇಲ್ಲ. ಆದರೆ, ಎಐಸಿಟಿಇ ಪ್ರಕಾರ, ನಿವೃತ್ತ ಅಧ್ಯಾಪಕರು ಜೀವಿತಾವಧಿಯಲ್ಲಿ ಸಂಶೋಧನಾ ವಿದ್ವಾಂಸರನ್ನು ಮೇಲ್ವಿಚಾರಣೆ ಮಾಡಬಹುದು
- ಯುಜಿಸಿಯಲ್ಲಿ ಪಿಎಚ್.ಡಿ. ಪೂರೈಸಲು ಕನಿಷ್ಠ ಮೂರು ವರ್ಷ ಸಮಯ ನಿಗದಿ ಮಾಡಲಾಗಿದೆ. ಇಲ್ಲಿ ಎರಡೂವರೆ ವರ್ಷಗಳಲ್ಲಿಯೇ ಪ್ರಬಂಧ ಸಲ್ಲಿಸಬಹುದು
- ನೆಟ್/ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು ವರ್ಷಪೂರ್ತಿ ಪಿಎಚ್.ಡಿ. ಪ್ರವೇಶಕ್ಕೆ ನೋಂದಣಿ ಮಾಡಿಕೊಳ್ಳಬಹುದು
- ಪ್ರಬಂಧದ ಗುಣಮಟ್ಟವನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ (ಎಐ) ಬಳಸಬಹುದು. ಕೃತಿಚೌರ್ಯದ ಪರಿಶೀಲನೆಗಳನ್ನು ಪರಚಯಿಸಬಹುದು
- ಸಂಶೋಧನಾ ವಿದ್ವಾಂಸರು ಸ್ಥಿರತೆ ಮತ್ತು ಉತ್ತಮ ರಚನಾತ್ಮಕ ಪ್ರಬಂಧವನ್ನು ಖಚಿತಪಡಿಸಿಕೊಳ್ಳಲು ಅನುಕೂಲವಾಗುವಂತೆ ಮಾದರಿ ಪ್ರಬಂಧ ಸ್ವರೂಪವನ್ನು ಸೂಚಿಸಲಾಗಿದೆ.
- ಸಂಶೋಧನಾ ವಿದ್ಯಾರ್ಥಿಗಳು ದೇಶದ ಯಾವುದೇ ವಿಶ್ವವಿದ್ಯಾಲಯಗಳಿಗೆ ವಲಸೆ ಹೋಗಬಹುದಾಗಿದೆ.
ಎಐಸಿಇಟಿಗೆ ಮೊದಲ ಬಾರಿಗೆ ಪಿಎಚ್.ಡಿ. ಮಾರ್ಗಸೂಚಿಯನ್ನು ಸಿದ್ಧಪಡಿಸಿಕೊಡಲಾಗಿದೆ. ಗುಣಮಟ್ಟದ ಸಂಶೋಧನಾ ದೃಷ್ಟಿಯಿಂದ ಹಲವು ವಿಚಾರಗಳಲ್ಲಿ ಯುಜಿಸಿಗಿಂತ ಸಾಕಷ್ಟು ಬದಲಾವಣೆ ಮಾಡಲಾಗಿದೆ. - ಪ್ರೊ.ಕೆ.ಆರ್. ವೇಣುಗೋಪಾಲ್, ಎಐಸಿಟಿಇ ಪಿಎಚ್.ಡಿ. ಮಾರ್ಗಸೂಚಿ ಸಮಿತಿ ಅಧ್ಯಕ್ಷ