ಕಾರ್ಪೊರೇಟ್ ಜಗತ್ತಿನಲ್ಲಿ ನೆಮ್ಮದಿಯೇ ಹೊಸ ಐಷಾರಾಮಿ (Luxury) ವಸ್ತುವಾಗಿದೆ ಎಂದು ಹಲವರು ಒಪ್ಪಿಕೊಂಡರೆ, ಕೆಲವರು ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೇವಲ ಲೈಕ್ಸ್ ಮತ್ತು ವ್ಯೂಸ್ ಪಡೆಯಲು (Engagement Farming) ಇಂತಹ ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಕಂಪನಿಗಳು ಇಷ್ಟು ದೊಡ್ಡ ಆಫರ್‌ಗಳನ್ನು ವಾಟ್ಸಾಪ್‌ನಲ್ಲಿ ನೀಡುವುದಿಲ್ಲ, ಜನರನ್ನು ಮೂರ್ಖರನ್ನಾಗಿಸಬೇಡಿ ಎಂದು ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದಾರೆ. ಏನೇ ಇರಲಿ, ಇಂದಿನ ಯುವ ಪೀಳಿಗೆಗೆ ದುಡ್ಡಿಗಿಂತ ಮಾನಸಿಕ ಆರೋಗ್ಯ ಮುಖ್ಯವಾಗುತ್ತಿರುವುದಂತೂ ಸತ್ಯ,(ಏಜೆನ್ಸೀಸ್).