ಟೆಕ್ ಕಂಪನಿ ಸಿಇಒ ರಾಜೀನಾಮೆ

tech ceo
Published on

ವಾಷಿಂಗ್ಟನ್: ಕೋಲ್ಡ್​ಪ್ಲೇ ಸಂಗೀತ ಕಾರ್ಯಕ್ರಮದಲ್ಲಿ ತಮ್ಮ ಕಂಪನಿಯ ಮಹಿಳಾ ಉದ್ಯೋಗಿಯನ್ನು ಆಲಿಂಗಿಸಿಕೊಂಡ ದೃಶ್ಯ ವೈರಲ್ ಆದ ಹಿನ್ನೆಲೆಯಲ್ಲಿ ಆಸ್ಟ್ರೋನಾಮರ್ ಐಟಿ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಂಡಿ ಬೈರನ್ ರಾಜೀನಾಮೆ ನೀಡಿದ್ದಾರೆ. ಮೆಸಾಚುಸೆಟ್ಸ್​ನ ಗಿಲೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಕೋಲ್ಡ್​ಪ್ಲೇ

ಕಾನ್ಸರ್ಟ್​ನ ಜಂಬೋಟ್ರಾನ್​ನಲ್ಲಿ ಆಂಡಿ ಬೈರನ್ ತಮ್ಮ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಕ್ರಿಸ್ಟಿನ್ ಕ್ಯಾಬಾಟ್ ಅವರನ್ನು ಹಿಂದಿನಿಂದ ತಬ್ಬಿಕೊಂಡ ದೃಶ್ಯ ಕಾಣಿಸಿತ್ತು. ಬೃಹತ್ ಪರದೆಯಲ್ಲಿ ತಮ್ಮ ಕೃತ್ಯ ಕಾಣುತ್ತಿದ್ದಂತೆಯೇ ಇಬ್ಬರೂ ಮುಜುಗರಕ್ಕೊಳಗಾಗಿ ಮುಖ ಮರೆಸಿಕೊಂಡಿದ್ದರು. ಈ ವಿಡಿಯೊ ಭಾರಿ ವೈರಲ್ ಆಗಿತ್ತು. ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಕಂಪನಿ, ಕೂಡಲೇ ಸಹಸಂಸ್ಥಾಪಕ ಪೀಟ್ ಡಿಜಾಯ್ ಅವರನ್ನು ತಾತ್ಕಾಲಿಕ ಸಿಇಒ ಆಗಿ ನೇಮಿಸಿ, ಆಂಡಿ ಅವರನ್ನು ರಜೆ ಮೇಲೆ ಕಳಿಸಿತ್ತು. ಇದೀಗ ಆಂಡಿ, ಕಂಪನಿಯ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ರಾಜೀನಾಮೆ ಘೊಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net