ಸಾವಿತ್ರಿಬಾಯಿ ಪುಲೆ ದೇಶ ಕಂಡ ಮಹಾನ್​ ಸಾಧಕಿ

23-RNR-01
Published on

ರಾಣೆಬೆನ್ನೂರ: 19ನೇ ಶತಮಾನದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿರುವ ಸಾವಿತ್ರಬಾಯಿ ಪುಲೆ ದೇಶ ಕಂಡ ಮಹಾನ್​ ಸಾಧಕಿ ಎಂದು ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಶಿಕ್ಷಕರ ಪತ್ತಿನ ಸಹಕಾರ ಸಭಾಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರ ಸಂಘ ಹಾಗೂ ಸಾವಿತ್ರಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕಿಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

1931ರಲ್ಲಿ ಜನಿಸಿದ ಸಾವಿತ್ರಿಬಾಯಿ ಪುಲೆಯವರ ಮಹಿಳೆ ಕೇವಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇರುವಂತಹ ಸ್ಥಿತಿ ಇತ್ತು. ಅದನ್ನು ಹೋಡಿದೊಡಿಸಬೇಕು ಎಂಬ ಉದ್ದೇಶದಿಂದ ಸಾವಿತ್ರಾಬಾಯಿ ಪುಲೆ ಅವರು ಮಹಿಳೆಯರು ಶಿಕ್ಷಣಕ್ಕೆ ನಾಂದಿ ಹಾಡಿದರು. ನಂತರ ಅವರ ಶಿಕ್ಷಣ ಕ್ರಾಂತಿಯಿಂದ ಇಂದಿನ ಮಹಿಳೆಯರು ಪುರುಷರಗಿಂತ ಎತ್ತರ ಮಟ್ಟದಲ್ಲಿ ಬೆಳೆದಿರುವುದಕ್ಕೆ ಫುಲೆ ಅವರ ಕಾರಣ ಎಂದರು.

ಮಕ್ಕಳ ತಜ್ಞೆ ಡಾ. ಹೇಮಾ ಪಾಟೀಲ ಮಾತನಾಡಿ, ಮಹಿಳೆಯರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕು. ಮೂರು ದಶಕಗಳಿಂದ ಮಹಿಳೆಯರ ಆರೋಗ್ಯದಲ್ಲಿ ಬದಲಾವಣೆ ಆಗುತ್ತಿದೆ. ಅದನ್ನು ಸರಿ ಮಾಡಿಕೊಳ್ಳಲು ಮೊದಲಾಗಿ ಅವರು ನಿತ್ಯ ಯೋಗ, ವ್ಯಾಯಾಮ ಸೇರಿದಂತೆ ಧಾನ್ಯ ಮಾಡಬೇಕು ಎಂದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಎನ್​.ಆರ್​. ಚೂಡಾಮಣಿ, ಪಿಕೆಕೆ ಸಂಸ್ಥೆ ಅಧ್ಯಕ್ಷೆ ರ್ಪೂಣಿಮಾ ಕೋಳಿವಾಡ, ಡಯಟ್​ ಹಿರಿಯ ಉಪನ್ಯಾಸಕಿ ವಿಜಯಾ ಪಾಟೀಲ, ಬಿಇಓ ಶ್ಯಾಮಸುಂದರ ಅಡಿಗ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ, ತಾಲೂಕು ಅಧ್ಯಕ್ಷ ಮಂಜುನಾಥ ಕೆಂಚರಡ್ಡಿ, ಮಂಜ್ಯಾನಾಯ್ಕ್​ ಎಲ್​, ಸುರೇಶ ಕೋಟಿಹಾಳ, ಸಹನಾ ದೈವಜ್ಞ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net