

ಎನ್.ಆರ್.ಪುರ: ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವ ಜತೆಗೆ ಸಾತ್ವಿಕತೆ ತುಂಬುವ ಕೆಲಸ ಮಾಡಬೇಕು ಎಂದು ಕಳಸಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕಲ್ಕಟ್ಟೆ ನಾಗರಾಜರಾವ್ ಹೇಳಿದರು.
ಶಿಕ್ಷಣ ಇಲಾಖೆ, ಪಪಂ, ತಾಪಂ ಸಹಯೋಗದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರಿಗೆ ಅಧಿಕಾರ ಸಿಕ್ಕರೆ ಎಲ್ಲ ಪ್ರಜೆಗಳನ್ನು ಒಳ್ಳೆಯವರನ್ನಾಗಿ ಮಾಡುತ್ತಾರೆ. ಇದರಿಂದ ದೇಶದಲ್ಲಿ ಕ್ರಿಮಿನಲ್ ಸಂಖ್ಯೆ ಕಡಿಮೆಯಾಗುತ್ತದೆ. ಶಿಕ್ಷಣ ಎಂದರೆ ಒಂದು ಸಾಧನ. ಮನುಷ್ಯತ್ವ, ಮಾನವೀಯತೆ ಕಲಿಸುವುದು ಸಹ ಶಿಕ್ಷಣವಾಗಿದೆ ಎಂದರು.
ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ರಾಧಾಕೃಷ್ಣನ್ ಅವರ ಆದರ್ಶವನ್ನು ಇಂದಿನ ಪೀಳಿಗೆ ಪಾಲಿಸಬೇಕು. ಈ ಬಾರಿ ಎನ್.ಆರ್.ಪುರ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಲಿತಾಂಶ ಸಿಕ್ಕಿದೆ. ಇದಕ್ಕೆ ತಾಲೂಕಿನ ಶಿಕ್ಷಕರೇ ಕಾರಣ ಎಂದರು.
ಬಿಇಓ ಕೆ.ಆರ್.ಪುಷ್ಪಾ , 12 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ತಾಲೂಕಿನ ಪ್ರಾಥಮಿಕ ಶಾಲಾ ವಿಭಾಗದ ಆರ್.ಪಿ.ಮಠದ ಜಯಕುಮಾರ್, ಶಿಕ್ಷಕಿ ಗಂಗಮ್ಮ, ಸರ್ವದಾ, ಕೆ.ಎಸ್.ಭಾಗ್ಯಾ, ಪ್ರೌಢಶಾಲಾ ವಿಭಾಗದಲ್ಲಿ ಗುಣಪಾಲ್‌ಜೈನ್, ಎಸ್.ರಮೇಶ್, ಆಸ್ಪಾ ಅಖ್ತರ್ ಅವರಿಗೆ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪಪಂ ಅಧ್ಯಕ್ಷೆ ಸುರೈಯಾ ಭಾನು, ಸದಸ್ಯೆ ಜುಬೇದಾ, ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಪೂರ್ಣೇಶ್, ಎಚ್.ಡಿ.ನವೀನ್‌ಕುಮಾರ್, ಆರ್.ವಿ.ಮಂಜುನಾಥ್, ಮಂಜುನಾಥ್, ಡಿ.ಎನ್.ಮಂಜುನಾಥ್, ಗೇರ್‌ಬೈಲು ನಟರಾಜ, ಕೆ.ಎಂ.ಸುಂದರೇಶ್, ಶ್ರೀನಿವಾಸ್, ಬಿ.ನಂಜುಂಡಪ್ಪ, ಅಶೋಕ್,ಮನೀಶ್, ಕೋಟ್ರೇಶಪ್ಪ,ರಾಘವೇಂದ್ರ, ಶ್ರೀಕಾಂತ್, ಕಟ್ಟೇಗೌಡ ಇತರರಿದ್ದರು.