ಮಕ್ಕಳಿಗೆ ಸಲಹೆಗಿಂತ ಸಾಥ್ ಮುಖ್ಯ : ಡಾ.ಸಾಯಿಗೀತಾ ಅನಿಸಿಕೆ

16-Teacher's Day
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಶಿಷ್ಯರಿಲ್ಲದೆ ಗುರು ಆಗಲು ಅಸಾಧ್ಯ. ಸುಂದರ ಪರಿಸರ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹೆತ್ತವರು ಮಕ್ಕಳಿಗೆ ಸಲಹೆ ನೀಡುವ ಬದಲು ಜತೆಯಾಗಿ ಕರೆದುಕೊಂಡು ಹೋದಾಗ ನಮ್ಮ ಭಾಷೆ, ಸಂಸ್ಕೃತಿ ಅರಿತುಕೊಳ್ಳಲು ಸಾಧ್ಯ. ಹೆತ್ತವರು ಮತ್ತು ಶಿಕ್ಷಕರು ಮಕ್ಕಳಲ್ಲಿ ಭಾಷೆ ಮತ್ತು ಮಾನವೀಯತೆಯ ಸ್ಪರ್ಶ ಬೆಳೆಸಬೇಕು. ಇವೆರಡು ಮಕ್ಕಳಲ್ಲಿದ್ದರೆ ಮುಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲೂ ಮಿಂಚಲು ಸಾಧ್ಯ ಎಂದು ನಿಟ್ಟೆ ವಿಶ್ವವಿದ್ಯಾಲಯ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ಸಾಯಿಗೀತಾ ಹೆಗ್ಡೆ ಹೇಳಿದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಮಂಗಳವಾರ ಕುತ್ತಾರ್ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಕರಾದ ಎಂ.ಎಚ್.ಮಲಾರ್, ಜಾನಕಿ ಪುತ್ರನ್, ಎಡಲಿನ್ ಸೆರಾಲಿನ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಜಯರಾಂ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯ ಯು.ಎಂ.ಜಬ್ಬಾರ್, ಅಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಸದಾನಂದ ಬಂಗೇರ, ದೇವಕಿ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಪ್ರಸ್ತಾವನೆಗೈದರು. ಆನಂದ ಕೆ.ಅಸೈಗೋಳಿ ವಂದಿಸಿದರು. ಕೆಎಂಕೆ ಮಂಜನಾಡಿ ನಿರೂಪಿಸಿದರು.

ಶಿಕ್ಷಕರಿಗೆ ಪ್ರಶಸ್ತಿ ಪಡೆದಾಗ ಸನ್ಮಾನ ಸಾಮಾನ್ಯ. ಆದರೆ ನಿವೃತ್ತರನ್ನು ಸನ್ಮಾನಿಸುವುದು ಅಪರೂಪ. ಅಂತಹ ಕಾರ್ಯ ಮಾಡಿದ ಕೀರ್ತಿ ಅಬ್ಬಕ್ಕ ಉತ್ಸವ ಸಮಿತಿಗೆ ಸಲ್ಲತ್ತದೆ. ಈ ಸನ್ಮಾನ ನಿವೃತ್ತಿ ಬಳಿಕ ಜವಾಬ್ದಾರಿಯಿಂದ ವಿರಮಿಸದಂತೆ ನೆನಪಿಸಿದೆ. ಎಂ.ಎಚ್.ಮಲಾರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ https://www.vijayavani.net/gram-panchayat-fixed-notice-board

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net