ಶಿಕ್ಷಕರೇ ರಾಷ್ಟ್ರ ನಿರ್ಮಾಪಕರು

teachers day
Published on

‘ರಾಷ್ಟ್ರದ ಗುಣಮಟ್ಟ ಅಲ್ಲಿನ ನಾಗರಿಕರ ಗುಣಮಟ್ಟದ ಮೇಲೆ ನಿರ್ಭರವಾಗಿರುತ್ತದೆ. ನಾಗರಿಕರ ಗುಣಮಟ್ಟ ಶಿಕ್ಷಣದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣದ ಗುಣಮಟ್ಟ ಶಿಕ್ಷಕರ ಮೇಲೆ

ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಶಿಕ್ಷಕರನ್ನು ‘ರಾಷ್ಟ್ರನಿರ್ವಪಕರು’ ಎಂದು ಸಂಬೋಧಿಸಿರುವುದು’ ಎಂದು 1964-66ರಲ್ಲಿ ರೂಪುಗೊಂಡ ಭಾರತೀಯ ಶಿಕ್ಷಣ ಆಯೋಗವು ಹೇಳಿದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕನಿಗೆ ದೇವರ ಸ್ಥಾನವನ್ನು (‘ಆಚಾರ್ಯ ದೇವೋ ಭವ’) ನೀಡಿದ್ದಾರೆ. ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಶಿಕ್ಷಕನು ವಿದ್ಯಾರ್ಥಿಗೆ ಎರಡನೇ ಜನ್ಮ ಕೊಡುತ್ತಾನೆಂಬ ಉಲ್ಲೇಖವಿದೆ.

ಶಿಕ್ಷಣದ ವ್ಯವಸ್ಥೆಯಲ್ಲಿ ಶಿಕ್ಷಕನ ಪಾತ್ರ ಮುಖ್ಯ ಹಾಗೂ ಶ್ರೇಷ್ಠವಾದದ್ದು. ಶಿಕ್ಷಕನು ವಿದ್ಯಾರ್ಥಿಯ ಮನಸ್ಸಿನಲ್ಲಿ ಕಲಿಕೆಯ ಉತ್ಸಾಹ, ಜ್ಞಾನದ ಹಸಿವನ್ನು ಮೂಡಿಸಬೇಕು. ಅದಕ್ಕೆ ಶಿಕ್ಷಕರು ಜ್ಞಾನದಾಹಿಗಳು ಮತ್ತು ಜ್ಞಾನವಂತರಾಗಿರಬೇಕು. ಶಿಕ್ಷಕರ ಭಾವದಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಭಾವನೆಗಳು ಮೈಗೂಡಿಸಿಕೊಳ್ಳುವಂತಹ ಪ್ರೇರಣೆ ದೊರೆಯಬೇಕು. ಮುಖ್ಯವಾಗಿ ಶೀಲ. ಶಿಕ್ಷಕರು ಸಚ್ಚಾರಿತ್ರ್ಯಂತರಾಗಿದ್ದು, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಚಾರಿತ್ರ್ಯ ಮಹತ್ವ ಹಾಗೂ ಅದರ ನಿರ್ವಣಕ್ಕೆ ಪ್ರೇರೇಪಿಸಬೇಕು. ಆಗ ಶಿಕ್ಷಕರು ರಾಷ್ಟ್ರನಿರ್ವಪಕರಾಗಲು ಸಾಧ್ಯ.

‘ಕೆಲವರು ಕೆಲಸ ಮಾಡುವವರಲ್ಲಿ ಪರಿಣಿತರು. ಇನ್ನು ಕೆಲವರು ಜ್ಞಾನವನ್ನು ಅಥವಾ ತಿಳಿದಿರುವ ವಿಷಯವನ್ನು ವಿಶೇಷವಾಗಿ ತಿಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಯಾರಲ್ಲಿ ಈ ಎರಡೂ ಕಲೆಗಳು ಚೆನ್ನಾಗಿವೆಯೋ, ಅವನೇ ಉತ್ತಮ ಶಿಕ್ಷಕ. ಅವರು ಜೀವನ ಪಯಣದಲ್ಲಿ (ಬಂಡಿಯಲ್ಲಿ) ನಮ್ಮನ್ನು ಮುಂದೆ ಬರುವಂತೆ ಮಾಡುತ್ತಾರೆ’ (ಶ್ಲಿಷ್ಟಾ ಕ್ರಿಯಾ ಕಸ್ಯಚಿದಾತ್ಮಸಂಸ್ಥಾ ಸಂಕ್ರಾಂತಿರನ್ಯಸ್ಯ ವಿಶೇಷಯುಕ್ತಾ | ಯಸ್ಯೋಭಯಂ ಸಾಧು ಸ ಶಿಕ್ಷಕಾಣಾಂ ಧುರಿ ಪ್ರತಿಷ್ಠಾಪಯಿತವ್ಯ ಏವ || - ಮಾಲವಿಕಾಗ್ನಿಮಿತ್ರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net