4 ಬಾರಿ ಮುಂದೂಡಿದ್ದ ಶಿಕ್ಷಕರ ವರ್ಗಾವಣೆಗೆ ಮರು ಚಾಲನೆ

transfer
Published on

ಬೆಂಗಳೂರು ಸತತ ನಾಲ್ಕು ಬಾರಿ ತಾಂತ್ರಿಕ ಕಾರಣಗಳಿಂದ ಮುಂದೂಡಿದ್ದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಇದೇ 31ರಿಂದ ಮರು ಚಾಲನೆ ನೀಡಲಾಗುತ್ತಿದೆ.

ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್ ನಂತರದಲ್ಲಿ ಕಾರ್ಯನಿರತ ಶಿಕ್ಷಕರನ್ನು ವಿಷಯವಾರು ಮಂಜೂರಾದ ಹುದ್ದೆಗಳಿಗೆ ಮರು ಮ್ಯಾಪ್ ಮಾಡಿದ ನಂತರ ಜಿಲ್ಲೆಯೊಳಗಿನ ವರ್ಗಾವಣೆ ಕೌನ್ಸೆಲಿಂಗ್‌ಗೆ ಅರ್ಹ ಖಾಲಿ ಹುದ್ದೆಗಳನ್ನು ಅ.31ರಂದು ಮರು ಪ್ರಕಟಿಸಲಾಗುತ್ತದೆ.

ಅಂತಿಮ ಆದ್ಯತಾ ಪಟ್ಟಿಯಂತೆ ಕೋರಿಕೆ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನ.4ರಂದು ಸ್ಥಳ ನಿಯುಕ್ತಿಗೊಳಿಸಲಾಗುತ್ತದೆ. ವಿಭಾಗೀಯ ಮತ್ತು ಅಂತರ್ ವಿಭಾಗೀಯ ವರ್ಗಾವಣೆ ವೇಳಾಪಟ್ಟಿಯನ್ನು ಕೂಡ ಪರಿಷ್ಕರಿಸಲಾಗಿದೆ. ಡಿ.6ರಂದು ಪ್ರಕ್ರಿಯೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net