

ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಶಿಕ್ಷಣ ಇಲಾಖೆಯು ಮುಂದೂಡಿದೆ. ಮುಂದಿನ ಎಲ್ಲ ರೀತಿಯ ಕೌನ್ಸೆಲಿಂಗ್ ದಿನಾಂಕವನ್ನು ಪರಿಷ್ಕೃತ ವೇಳಾಪಟ್ಟಿಯಲ್ಲಿ ಮುಂದೆ ತಿಳಿಸುವುದಾಗಿ ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಕರಿಗೆ ಸೂಚನೆ ನೀಡಿದೆ.
ಶಿಕ್ಷಣ ಇಲಾಖೆಯ ಪರಿಷ್ಕೃತ ವೇಳಾಪಟ್ಟಿ-3ರ ಪ್ರಕಾರ ಗುರುವಾರ ನಡೆಯಬೇಕಿದ್ದ ನಿರ್ದಿಷ್ಟ ಹುದ್ದೆಗಳ ಗರಿಷ್ಠ ಅವಧಿ ಪೂರೈಸಿ ಹೊರಹೋಗುವವರ ಕೌನ್ಸೆಲಿಂಗ್ ಅನ್ನು ತಾಂತ್ರಿಕ ಕಾರಣಗಳಿಂದ ಮುಂದೂಡಿದೆ. ಮುಂದಿನ ಎಲ್ಲ ರೀತಿಯ ಕೌನ್ಸೆಲಿಂಗ್ ದಿನಾಂಕಗಳನ್ನು ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಕೂಡ ಇದೇ ರೀತಿ ಒಮ್ಮೆ ಕೌನ್ಸೆಲಿಂಗ್ ಅನ್ನು ಮುಂದೂಡಿತ್ತು. ಆನಂತರ ಪರಿಷ್ಕೃತ ವೇಳಾಪಟ್ಟಿ ರೂಪಿಸಿ ಕೌನ್ಸೆಲಿಂಗ್ ನಡೆಸುತ್ತಿತ್ತು. ಇದೀಗ ತಾಂತ್ರಿಕ ಕಾರಣ ನೀಡಿ ಇದನ್ನು ಸಹ ಮುಂದೂಡಿದೆ.