

ರಾಣೆಬೆನ್ನೂರ: ರಾಜ್ಯದಲ್ಲಿ ಖಾಲಿಯಿರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭತಿರ್ ಮಾಡುವುದು ಸೇರಿ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚಚಿರ್ಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ದೈಹಿಕ ಶಿಣ ಶಿಕರ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಸಂದ ವತಿಯಿಂದ ನಗರದ ವರ್ತಕರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಕಾರ್ಯಕಾರಿ ಸಮಿತಿಯ 2024&25ನೇ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಣ ಶಿಕ, ಶಿಕಿಯರ ಸಮಸ್ಯೆಗಳ ಕುರಿತು ನನಗೂ ಗಮನಕ್ಕೆ ಇದೆ. ಕಳೆದ ಹಲವಾರು ವರ್ಷಗಳಿಂದ ದೈಹಿಕ ಶಿಕರ ಅನೇಕ ಸಮಸ್ಯೆಗಳು ಹಾಗೆಯೇ ಉಳಿದಿವೆ. ಅವುಗಳ ಇತ್ಯರ್ಥಕ್ಕಾಗಿ ಈಗಾಗಲೇ ಒಂದು ಬಾರಿ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳೊಂದಿಗೆ ಚಚಿರ್ಸಿದ್ದೇನೆ ಎಂದರು.
ಸಂದ ರಾಜ್ಯಾಧ್ಯಕ್ಷ ಚೌಡಪ್ಪ ಎಸ್. ಮಾತನಾಡಿ, ಕಳೆದ ಹಲವು ವರ್ಷಗಳಿಂದ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ, ಸರ್ಕಾರ ಬೇಡಿಕೆ ಈಡೇರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದೇ ರೀತಿ ಮುಂದುವರಿದರೆ ಹೋರಾಟ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ಕಾರ್ಯಾಧ್ಯ ಪಿ.ಡಿ. ಕಾಲವಾಡ, ಪ್ರಧಾನ ಕಾರ್ಯದಶಿರ್ ಚಂದ್ರಶೇಖರ ಕೆ.ಜೆ., ಖಜಾಂಚಿ ಡಿ.ವಿ. ಬಾಲರಾಜು, ರಾಜ್ಯ ಉಪಾಧ್ಯ ಬಸವರಾಜ ಪಿ., ಪ್ರಮೋದ ರೋಣದ, ವಿಭಾಗಿಯ ಕಾರ್ಯದಶಿರ್ ಶಾಹೀನಾ ಎ್., ಆರ್.ಟಿ.ಇ.ಎಸ್ ಶಿಣ ಸಂಸ್ಥೆಯ ಅಧ್ಯ ಸುಭಾಸ ಸಾವಕಾರ, ಎಚ್.ಪಿ. ಬಣಕಾರ, ಚಂದ್ರು ಗ್ಯಾನಗೌಡ್ರ ಮತ್ತಿತರರು ಉಪಸ್ತಿತರಿದ್ದರು.