ಕಂಠ ಪೂರ್ತಿ ಕುಡಿದು ಶಾಲೆಗೆ ಬಂದ ಶಿಕ್ಷಕಿ! ಸಿಬ್ಬಂದಿಯಿಂದ ದೂರು... teacher

video viral (1)
Published on

ಮಧ್ಯಪ್ರದೇಶ: ( teacher ) ಮಧ್ಯಪ್ರದೇಶದಧಾರ್ ಜಿಲ್ಲೆಯ ಸಿಂಘಾನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ಕಂಠ ಪೂರ್ತಿ ಕುಡಿದು ಶಾಲೆಗೆ ಬಂದಿದ್ದಾಳೆ. ಶಾಲೆಯಲ್ಲಿ ಕೆಲಸ ಮಾಡುವವರ ಜತೆ ಜಗಳವಾಡಿದ್ದಾಳೆ. ಶಿಕ್ಷಕಿ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಈ ವಿಡಿಯೋ ಜೂನ್ 23 ರದ್ದಾಗಿದ್ದು. ಮಹಿಳಾ ಶಿಕ್ಷಕಿ ಕುಡಿದ ಮತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಶಾಲೆಯಲ್ಲಿ ಮಕ್ಕಳು ಸಹ ಇದ್ದರು.

ಮಾಹಿತಿಯ ಪ್ರಕಾರ, ಕವಿತಾ ಕವಾಚೆ ಅವರು ಸಿಂಘಾನ ಪ್ರಾಥಮಿಕ ಶಾಲೆ ಶಿಕ್ಷಕಿ. ಈ ಶಾಲೆಯಲ್ಲಿ, ಈ ಮಹಿಳಾ ಶಿಕ್ಷಕಿ ಐದನೇ ತರಗತಿಯವರೆಗೆ ಸುಮಾರು 150 ಮಕ್ಕಳಿಗೆ ಕಲಿಸುತ್ತಾರೆ. ಪ್ರತಿದಿನ ಕುಡಿದ ಮತ್ತಿನಲ್ಲಿ ಬರುತ್ತಾರೆ. ಹಲವು ಬಾರಿ ಕರೆದು ಸಂಸ್ಥೆ ಅವರು ಬುದ್ಧಿ ಹೇಳಿದರು ಮದ್ಯಪಾನದ ಅಭ್ಯಾಸದಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಕುಡಿದ ಮತ್ತಿನಲ್ಲಿ ಸಿಬ್ಬಂದಿಯೊಂದಿಗೆ ಅವರು ಅಸಭ್ಯವಾಗಿ ವರ್ತಿಸುತ್ತಾರೆ.

ಈ ವೈರಲ್ ವಿಡಿಯೋದಲ್ಲಿ, ಶಾಲೆಯಲ್ಲಿದ್ದ ಸಿಬ್ಬಂದಿ ಶಿಕ್ಷಕಿಯನ್ನು ನೀವು ಏಕೆ ಮದ್ಯ ಕುಡಿಯುತ್ತೀರಿ ಎಂದು ಕೇಳಿದಾಗ, ಆಕೆ ಬಳಿ ಉತ್ತರವೇ ಇಲ್ಲ. ನೀವು ಏನಾದರೂ ಹೇಳಿದರೆ, ನಾನು ನಿಮ್ಮನ್ನು ಹೊಡೆಯುತ್ತೇನೆ, ಇದು ನನ್ನ ಶಾಲೆ, ಹೆಚ್ಚು ನಾಟಕ ಮಾಡಬೇಡಿ ಎಂದು ಶಿಕ್ಷಕಿ ಹೇಳುತ್ತಾ ಜಗಳ ಮಾಡುವುದನ್ನು ನೋಡಬಹುದಾಗಿದೆ. ಮಹಿಳಾ ಶಿಕ್ಷಕಿ ಜನರೊಂದಿಗೆ ಜಗಳವಾಡುತ್ತಿರುವುದು ಕಂಡುಬರುತ್ತದೆ.

ಈ ಹಿಂದೆಯೂ ದೂರುಗಳ ಆಧಾರದ ಮೇಲೆ ಶಿಕ್ಷಕಿಗೆ ವಿವರಣೆ ನೀಡಲಾಗಿತ್ತು, ಇದು ಪುನರಾವರ್ತನೆಯಾಗುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ, ಅವರಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಲು ವರದಿಯನ್ನು ಸಿದ್ಧಪಡಿಸಿ ಉನ್ನತ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net