ಶಿಕ್ಷಕರ ಅರ್ಹತಾ ಪರೀಕ್ಷೆ ಯಶಸ್ವಿ

exams
ಸಾಂದರ್ಭಿಕ ಚಿತ್ರ
Published on

ಬೆಂಗಳೂರು

ಶಾಲಾ ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ ಭಾನುವಾರ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಯು (ಟಿಇಟಿ) ಯಶಸ್ವಿಯಾಗಿ ನಡೆದಿದೆ.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಿತು. ಪತ್ರಿಕೆ-1 (1ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರು) 544 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ನೋಂದಣಿ ಮಾಡಿಕೊಂಡಿದ್ದ 1,43,719 ಅಭ್ಯರ್ಥಿಗಳಲ್ಲಿ 1,27,130 (ಶೇ.88.45) ಮಂದಿ ಹಾಜರಾಗಿದ್ದಾರೆ. ಅದೇ ರೀತಿ ಪತ್ರಿಕೆ-2 (6ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರು) 711 ಕೇಂದ್ರಗಳಲ್ಲಿ ನಡೆದಿದ್ದು, 1,90,015 ಮಂದಿಯಲ್ಲಿ 1,74,834 (ಶೇ.92.01) ಹಾಜರಾಗಿದ್ದಾರೆಂದು ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net