ಚಹಾ ವಿತ್​ ಪೆಪ್ಸಿ! ಇದನ್ನು ಕುಡಿದ್ರೆ ಅದೋಗತಿ; ವೈರಲ್ ವಿಡಿಯೋಗೆ ನೆಟ್ಟಿಗರು ಶಾಕ್

ವಿಜಯವಾಣಿ - 2024-07-11T210546.465
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಘಟನೆಗಳು ಕ್ಷಣಮಾತ್ರದಲ್ಲಿ ವ್ಯಾಪಕವಾಗಿ ಹರಿದಾಡುತ್ತದೆ. ಅದರಲ್ಲೂ ವಿಚಿತ್ರ ಹಾಗೂ ವಿಭಿನ್ನತೆ ಮೀರಿದ ವಿಡಿಯೋಗಳು ಮಾತ್ರ ಭಾರೀ ವೈರಲ್ ಆಗಿ, ಎಲ್ಲರ ಟೀಕೆ, ವ್ಯಂಗ್ಯಕ್ಕೆ ಕಾರಣವಾಗುತ್ತದೆ. ಸದ್ಯ ಇಲ್ಲೊಂದು ದೃಶ್ಯ ಕೂಡ ಅದೇ ಸಾಲಿಗೆ ಸೇರ್ಪಡೆಗೊಂಡಿದ್ದು, ಇನ್ನು ಈ ಕಣ್ಣಿನಲ್ಲಿ ಏನೇನು ನೋಡಬೇಕು? ಹೀಗೂ ಉಂಟಾ ಎನ್ನುವಂತೆ ಮಾಡಿದೆ.

ಆಹಾರ ಪ್ರಿಯರಿಗಂತೂ ಈ ವಿಡಿಯೋ ತೀವ್ರ ಮುಜುಗರ ಉಂಟುಮಾಡಿದೆ. ರಸ್ತಬದಿಯಲ್ಲಿ ಚಹಾ ತಯಾರಿಸುವ ವ್ಯಾಪಾರಿಯೊಬ್ಬ ಅದಕ್ಕೆ ಪೆಪ್ಸಿ ಕೂಲ್​ಡ್ರಿಂಕ್ಸ್​ನ ಮಿಕ್ಸ್​ ಮಾಡಿ ಜನರಿಗೆ ಕೊಡುತ್ತಿರುವ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಪೆಪ್ಸಿ ವಿತ್ ಚಹಾ ವಿಡಿಯೋ ನೋಡುತ್ತಿದ್ದಂತೆ ಟೀ ಪ್ರಿಯರು ಗಾಬರಿಗೊಂಡಿದ್ದಾರೆ.

ಬಿಸಿ ಬಿಸಿ ಚಹಾಗೆ ಯಾರು ಪೆಪ್ಸಿಯಂತಹ ಕೂಲ್​ಡ್ರಿಂಕ್ಸ್​ನ ಮಿಕ್ಸ್ ಮಾಡ್ತಾರೆ ಎಂಬ ಪ್ರಶ್ನೆ ಇಟ್ಟುಕೊಂಡವರಿಗೆ ಈತ ಉತ್ತರವಾಗಿದ್ದಾನೆ. ಯಾಕಂದ್ರೆ, ತನ್ನ ಚಹಾ ಅಂಗಡಿಗೆ ಬರುವ ಗ್ರಾಹಕರಿಗೆ ಪೆಪ್ಸಿ ವಿತ್ ಟೀ ಕೊಡುವ ವಿಚಿತ್ರ ಅಭ್ಯಾಸ ಈತ ರೂಢಿಸಿಕೊಂಡಿದ್ದಾನೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net