40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲಿದೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್

TCS
Published on

ನವದೆಹಲಿ: ಪ್ರಸ್ತುತ ಹಣಕಾಸು ವರ್ಷದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯು 40,000 ಮಂದಿ ಫ್ರೆಶರ್​​ಗಳನ್ನು ಕ್ಯಾಂಪಸ್ ನೇಮಕಾತಿ ಮಾಡಲಿದೆ ಎಂದು ಟಿಸಿಎಸ್ ಸಿಒಒ ಎನ್ ಗಣಪತಿ ಸುಬ್ರಮಣ್ಯಂ ಹೇಳಿದ್ದಾರೆ.

ಟಾಟಾ ಗ್ರೂಪ್‌ ಒಡೆತನದ ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿ ಟಿಸಿಎಸ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದೆ. ದೇಶಾದ್ಯಂತ ಕಂಪನಿಯನ್ನು ಭಾರೀ ಮುಜುಗರಕ್ಕೆ ಗುರಿ ಮಾಡಿದ್ದ ಪ್ರಕರಣದಲ್ಲಿ ತನ್ನ 16 ಉದ್ಯೋಗಿಗಳಿಗೆ ಮನೆ ದಾರಿ ತೋರಿಸಿದೆ. ಅಲ್ಲದೆ, ಉದ್ಯೋಗಿಗಳನ್ನು ಪೂರೈಕೆ ಮಾಡುತ್ತಿದ್ದ 6 ಕ್ಲೈಂಟ್‌ಗಳ ಮೇಲೆ ನಿಷೇಧ ಹೇರಿರುವುದಾಗಿ ಭಾನುವಾರ ಮಾಹಿತಿ ನೀಡಿದೆ.

ಉದ್ಯೋಗ ನೇಮಕಾತಿಗೆ ಲಂಚವನ್ನು ಪಡೆಯುವ ಆರೋಪದಲ್ಲಿ ಸುದ್ದಿಯಾಗಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಹೊಸ ನೇಮಕಾತಿಯನ್ನು ಮಾಡುವ ನಿರ್ಧಾರವನ್ನು ಮಾಡಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಕಂಪನಿಯು 40,000 ಕ್ಯಾಂಪಸ್ ನೇಮಕಾತಿ ಮಾಡಲಿದೆ.

ಟಿಸಿಎಸ್ ಸಿಒಒ ಎನ್ ಗಣಪತಿ ಸುಬ್ರಮಣ್ಯಂ ಮಾತನಾಡಿ, "ನಾವು ಮುಂಬರುವ ವರ್ಷದಲ್ಲಿ 35,000 ರಿಂದ 40,000 ಜನರನ್ನು ನೇಮಿಸಿಕೊಳ್ಳುತ್ತೇವೆ. ಆದರೆ ಈ ಹಿನ್ನಲೆ ಯಾವುದೇ ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಮಾಡುವುದಿಲ್ಲ. ನಾವು ಹೊಸದಾಗಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕವಾಗಿ ಸುಧಾರಣೆ ಮಾಡುವ ಕಾರ್ಯವನ್ನು ಮಾಡುತ್ತಿದ್ದೇವೆ," ಎಂದು ತಿಳಿಸಿದರು.

ಇನ್ಫೋಸಿಸ್ ಸಿಎಫ್‌ಒ ನಿಲಂಜನ್ ರಾಯ್, ಕಳೆದ ವರ್ಷ 50,000 ಫ್ರೆಶರ್‌ಗಳನ್ನು ಸೇರಿಸಲಾಗಿದೆ. ಬೇಡಿಕೆ ಹೆಚ್ಚಾಗುವವರೆಗೆ ಕ್ಯಾಂಪಸ್‌ಗಳಿಗೆ ಹೋಗುವುದಿಲ್ಲ. ಕಳೆದ 12 ರಿಂದ 14 ತಿಂಗಳುಗಳಲ್ಲಿ, ನಾವು ಕ್ಷೀಣತೆಯನ್ನು ನೋಡಿದ್ದೇವೆ. ಅದು ಎಷ್ಟು ಕಾಲ ಮುಂದುವರಿಯುತ್ತದೆ ಎಂದು ನಮಗೆ ತಿಳಿದಿಲ್ಲ," ಎದು ತಿಳಿಸಿದರು.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಹಣಕಾಸು ವರ್ಷ 2024ರ ಸೆಪ್ಟೆಂಬರ್ 2023 ತ್ರೈಮಾಸಿಕದ ತನ್ನ ವರದಿಯನ್ನು ಬುಧವಾರ ಘೋಷಣೆ ಮಾಡಿದೆ. ಕಂಪನಿಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 2.4 ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ನೋಡಿದಾಗ ಶೇಕಡ 8.73 ರಷ್ಟು ಏರಿಕೆಯಾಗಿದೆ. ಸಂಸ್ಥೆಯು 11,342 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ಪ್ರಕಟಿಸಿದೆ. ಸಂಸ್ಥೆಯು ಷೇರುದಾರರಿಗೆ ಕಂಪನಿಯ ಲಾಭವನ್ನು ನೀಡಲಿದೆ. ಟಿಸಿಎಸ್ ನಿವ್ವಳ ಲಾಭವು ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ 11,074 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2023 ರ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 10,431 ಕೋಟಿ ರೂಪಾಯಿ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net