ಖಾಸಗಿ ಬಸ್​ಗಳಿಗೆ ತೆರಿಗೆ ವಿನಾಯಿತಿ; ಮಾಲೀಕರ ಬೇಡಿಕೆಗೆ ಪೂರಕ ನಿರ್ಧಾರ

Lakshman Savadi 17 May 20
Published on

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಕಳೆದ 2 ತಿಂಗಳಿಂದ ಬಸ್​ಗಳ ಓಡಾಟ ನಿಲ್ಲಿಸಿದ್ದರಿಂದ ತೆರಿಗೆ ವಿನಾಯಿತಿ ನೀಡಬೇಕು ಎಂದು ಖಾಸಗಿ ಬಸ್​ಗಳ ಮಾಲೀಕರು ಬೇಡಿಕೆಯಿಟ್ಟಿದ್ದು, ಇನ್ನೆರಡು ದಿನಗಳಲ್ಲಿ ಪೂರಕವಾದ ನಿರ್ಧಾರಕ್ಕೆ ಬರಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.

ಖಾಸಗಿ ಬಸ್​ಗಳ ಮಾಲೀಕರ ತೆರಿಗೆ ವಿನಾಯಿತಿ ಮನವಿ ಕುರಿತು ಸಿಎಂ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿ, ಆದಷ್ಟು ಬೇಗ ಬೇಡಿಕೆಗೆ ಪೂರಕವಾದ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಅಲ್ಲದೆ, 19ರಿಂದ ಖಾಸಗಿ ಬಸ್​ಗಳ ಸಂಚಾರಕ್ಕೂ ಮುಕ್ತ ಅವಕಾಶವಿದೆ. ಆದರೆ, ಸರ್ಕಾರದ ನಿಯಮ ಹಾಗೂ ಮಾರ್ಗಸೂಚಿ ಪಾಲಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net