ತೆರಿಗೆ ಸಂಗ್ರಹ 27 ಲಕ್ಷ ಕೋಟಿ ರೂ.ಗೆ ಏರಿಕೆ

Income Tax
Published on

ಮಾರ್ಚ್ 31ಕ್ಕೆ ಕೊನೆಗೊಂಡ 2021-22ರ ಆರ್ಥಿಕ ವರ್ಷದಲ್ಲಿ ನೇರ ಮತ್ತು ಪರೋಕ್ಷ ತೆರಿಗೆಯ ಮೂಲಕ 27.07 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗಿದೆ. ಕಳೆದ ಆರ್ಥಿಕ ಸಾಲಿಗಿಂತ ಶೇ. 34 ಅಧಿಕವಾಗಿದೆ. ಬಜೆಟ್​ನಲ್ಲಿ ಅಂದಾಜಿಸಿದ್ದ 22.17 ಲಕ್ಷ ಕೋಟಿ ರೂ. ನಿರೀಕ್ಷೆಗಿಂತಲೂ 5.10 ಲಕ್ಷ ಕೋಟಿ ರೂ. ಹೆಚ್ಚು ತೆರಿಗೆ ಆಕರವಾಗಿದೆ. 2020-21ರಲ್ಲಿ 20.27 ಲಕ್ಷ ಕೋಟಿ ರೂ. ಸಂಗ್ರಹ ಆಗಿತ್ತ್ತು ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ನೇರ ತೆರಿಗೆ
  • ನೇರ ತೆರಿಗೆಯಲ್ಲಿ 14.10 ಲಕ್ಷ ಕೋಟಿ ರೂ. ಆಕರ. ಈ ಬಾಬ್ತಿನಲ್ಲಿ ಬಜೆಟ್ ಅಂದಾಜಿಗಿಂತ 3.02 ಲಕ್ಷ ಕೋಟಿ ರೂ. ಅಧಿಕ ತೆರಿಗೆ ಸಂಗ್ರಹ.
  • ಕಾರ್ಪೋರೇಟ್ ತೆರಿಗೆಯಲ್ಲಿ ಶೇ. 56.1 ಹೆಚ್ಚಳ, 8.58 ಲಕ್ಷ ಕೋಟಿ ರೂ. ತೆರಿಗೆ ಶೇಖರ.
  • ವೈಯಕ್ತಿಕ ಆದಾಯ ತೆರಿಗೆಯಲ್ಲಿ ಶೇ. 43 ಏರಿಕೆಯಿಂದ 7.49 ಲಕ್ಷ ಕೋಟಿ ರೂ. ಸಂಗ್ರಹ.
  • ನೇರ ತೆರಿಗೆಯಲ್ಲಿ ಶೇ. 49 ಪ್ರಗತಿ
ಪರೋಕ್ಷ ತೆರಿಗೆ
  • 12.90 ಲಕ್ಷ ಕೋಟಿ ರೂ.ಪರೋಕ್ಷ ತೆರಿಗೆ ಶೇಖರ.
  • ಸೀಮಾಸುಂಕದಲ್ಲಿ ಶೇ. 48 ಏರಿಕೆಯಾಗಿ 1.99 ಲಕ್ಷ ಕೋಟಿ ರೂ. ಶೇಖರ.
  • ಸಿಜಿಎಸ್​ಟಿ ಮತ್ತು ಸೆಸ್​ನಲ್ಲಿ ಶೇ. 30 ಹೆಚ್ಚಳ, 6.95 ಲಕ್ಷ ಕೋಟಿ ರೂ. ಸಂಗ್ರಹ.
  • ಅಬಕಾರಿ ಸುಂಕದಲ್ಲಿ ಶೇ. 0.2 ಇಳಿಕೆ 3.90 ಲಕ್ಷ ರೂ. ಆಕರ.
  • ಪರೋಕ್ಷ ಸುಂಕದಲ್ಲಿ ಶೇ. 20ರಷ್ಟು ಏರಿಕೆ
  • 2021-22ರ ಜಿಡಿಪಿ ಅನುಪಾತದಲ್ಲಿ ಶೇ. 11.7 ಹೆಚ್ಚಳ. 23 ವರ್ಷದ ನಂತರ ಜಿಡಿಪಿ ಅನುಪಾತದಲ್ಲಿ ಈ ಏರಿಕೆ ಕಂಡಿದೆ.
  • ಹೆಚ್ಚುವರಿಯಾಗಿ ಪಾವತಿಯಾಗಿದ್ದ 2.24 ಲಕ್ಷ ಕೋಟಿ ರೂ. ಆದಾಯ ತೆರಿಗೆ 2.43 ಕೋಟಿ ಮಂದಿಗೆ ಮರುಪಾವತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net