ತೆರೆ ಮೇಲೆ ‘ಟಾಟಾ’ ಚರಿತ್ರೆ : ಪ್ರಸಿದ್ಧ ಉದ್ಯಮ ಕುಟುಂಬದ ಸಾಧಕರ ಬಗ್ಗೆ ಸರಣಿ ಆರಂಭಿಸಲು ಮುಂದಾದ ಟಿ-ಸೀರಿಸ್

ದ ಟಾಟಾಸ್ ಪುಸ್ತಕದ ಮುಖಪುಟ
ದ ಟಾಟಾಸ್ ಪುಸ್ತಕದ ಮುಖಪುಟ
Published on

ಪ್ರಮುಖ ಮುಖ್ಯಾಂಶಗಳು

  • ಸಿನಿಮಾವಾಗಲಿದೆ ಟಾಟಾ ಕುಟುಂಬದ ಸಾಧನೆ
  • ಗಿರೀಶ್ ಕುಬೇರ್ ಪುಸ್ತಕ ಆಧಾರಿಸಿ ಸಿನಿಮಾ
  • ಕರಣ್ ವ್ಯಾಸ್ ನಿರ್ದೇಶನ
ಭಾರತದ ಪ್ರಸಿದ್ಧ ಉದ್ಯಮ ಕುಟುಂಬಗಳಲ್ಲಿ ‘ಟಾಟಾ’ ಫ್ಯಾಮಿಲಿ ಪ್ರಮುಖವಾದುದು. ಉಪ್ಪಿನಿಂದ ವಿಮಾನ ಯಾನದವರೆಗೆ ಅಂದಾಜು 250ಕ್ಕೂ ಅಧಿಕ ಕಂಪನಿಗಳು ಈ ಕುಟುಂಬದ ಒಡೆತನದಲ್ಲಿವೆ. ಇನ್ನು 1868ರಲ್ಲಿ ಜಮ್‌ಶೆಡ್‌ಜೀ ಟಾಟಾ ಅವರಿಂದ ಆರಂಭವಾದ ಉದ್ಯಮ, ಅಂದಿನಿಂದ ಇಂದಿನವರೆಗೆ ಪ್ರಪಂಚಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ವಿಶ್ವಾಸಾರ್ಹತೆ ಸಾಧಿಸಿದೆ. ಇದೀಗ ಈ ಕಂಪನಿಯ ಹುಟ್ಟು, ಸಾಧನೆ, ಸಾಧಕರ ಕುರಿತು ವೆಬ್ ಸರಣಿ ಬರಲು ಸಿದ್ಧವಾಗುತ್ತಿದೆ. ‘ಮೇಡ್ ಇನ್ ಇಂಡಿಯಾ: ದ ಟೈಟಾನ್ ಸ್ಟೋರಿ’ ಬಳಿಕ ಟಿ-ಸೀರಿಸ್ ಸಂಸ್ಥೆ ಅಲ್‌ಮೈಟಿ ಮೋಷನ್ ಪಿಕ್ಚರ್ಸ್ ಜತೆಗೂಡಿ ಟಾಟಾ ಕುಟುಂಬದ ಸಾಧನೆಯನ್ನು ತೆರೆ ಮೇಲೆ ತರಲು ಮುಂದಾಗುತ್ತಿದೆ. ಲೇಖಕ ಗಿರೀಶ್ ಕುಬೇರ್ ರಚಿಸಿರುವ ‘ದ ಟಾಟಾಸ್’ ಪುಸ್ತಕದ ಆಧಾರದಲ್ಲಿ ಈ ಸರಣಿ ಮೂಡಿಬರಲಿದೆ. ದೇಶದಲ್ಲಿ ಟಾಟಾ ಕುಟುಂಬ ಹೇಗೆ ಉದ್ಯಮ ಆರಂಭಿಸಿತು? ದೇಶ ನಿರ್ಮಾಣದಲ್ಲಿ ಕಂಪನಿ ಪಾತ್ರವೇನು? ಸೇರಿ ಹಲವು ಮಹತ್ವದ ಅಂಶಗಳನ್ನು ಇಲ್ಲಿ ತಿಳಿಸಲಾಗುತ್ತದೆ. ಕಂಪನಿ ಜನಕರಾದ ಜಮ್‌ಶೆಡ್‌ಜೀ ಟಾಟಾ ಅವರಿಂದ 2024ರಲ್ಲಿ ನಿಧನರಾದ ರತನ್ ಟಾಟಾವರೆಗೆ ಕಂಪನಿ ಮುಖ್ಯಸ್ಥರ ಜೀವನ ಮತ್ತು ಸಾಧನೆ ಮೇಲೆ ಈ ಸರಣಿ ಬೆಳಕು ಚೆಲ್ಲಲಿದೆ. ಬರಹಗಾರ ಕರಣ್ ವ್ಯಾಸ್ ‘ದ ಟಾಟಾಸ್’ ಸಾರಥ್ಯ ವಹಿಸಲಿದ್ದು, ಶೀಘ್ರವೇ ಕಲಾವಿದರ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆಯನ್ನು ತಂಡ ಆರಂಭಿಸಲಿದೆೆ- ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net