ಮಾನವ ಕಳ್ಳ ಸಾಗಣೆ ತಡೆಗೆ ಜಾಗೃತಿ ಮೂಡಿಸಿ

30 TKE 4 college
ತರೀಕೆರೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣೆೆ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಿದ್ದಪ್ಪ ಟಕ್ಕಳಕಿ, ಎನ್.ಚರಣ್‌ರಾಜ್, ಎಸ್.ಸುರೇಶ್‌ಚಂದ್ರ, ಜಿ.ಸುಬ್ರಹ್ಮಣ್ಯ ಇತರರಿದ್ದರು.
Published on

ತರೀಕೆರೆ: ಮಾನವ ಕಳ್ಳ ಸಾಗಣೆಯಲ್ಲಿ ಸಿಲುಕಿರುವ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಜೆಎಂಎ್ಸಿ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ಹೇಳಿದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಪಂ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣೆ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಗಾಗ ಮಾನವ ಕಳ್ಳ ಸಾಗಣೆೆ ಪ್ರಕರಣ ಕಂಡುಬರುತ್ತಿದ್ದು ಪಾಲಕರು ಮಾಹಿತಿ ಬಂದ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಮುಂದಿನ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಹೇಳಿದರು. ಮಾನವ ಕಳ್ಳ ಸಾಗಣೆ ತಡೆ ಜಾಗೃತಿ ಕುರಿತಾದ ಪ್ರತಿಜ್ಞಾವಿಧಿ ಬೋಧಿಸಿದರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಸಿದ್ದಪ್ಪ ಟಕ್ಕಳಕಿ, ಸಿಡಿಪಿಒ ಎನ್.ಚರಣ್‌ರಾಜ್, ವಕೀಲರಾದ ಎಸ್.ಸುರೇಶ್‌ಚಂದ್ರ, ಜಿ.ಸುಬ್ರಹ್ಮಣ್ಯ, ಬಿ.ಶೇಖರ್‌ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net