ಮುಂದಿನ 24 ಗಂಟೆಗಳಲ್ಲಿ ಸುಂಕ ಹೆಚ್ಚಳ: ಡೊನಾಲ್ಡ್​ ಟ್ರಂಪ್​ ಮತ್ತೊಮ್ಮೆ​ ಬೆದರಿಕೆ! | Tariff Increase

Untitled design - 2025-08-05T195802.933
Published on

Tariff Increase: ಭಾರತ ರಷ್ಯಾದಿಂದ ತೈಲ ಖರೀದಿ ನಿರಂತರವಾಗಿ ಮುಂದುವರೆಸುತ್ತಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಭಾರತದ ಆಮದುಗಳ ಮೇಲೆ ಸುಂಕ ಗಣನೀಯವಾಗಿ ಹೆಚ್ಚಳ ಮಾಡುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಂಗಳವಾರ ಮತ್ತೊಮ್ಮೆ ಹೇಳಿದ್ದಾರೆ.

ಭಾರತ ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಿದ್ದಿದ್ದರೂ ಅದು ಉತ್ತಮ ವ್ಯಾಪಾರ ಪಾಲುದಾರನಲ್ಲ, ಹೀಗಾಗಿ, ನಾವು ಅವರರೊಂದಿಗೆ ವ್ಯಾಪರ ಮಾಡಲು ಬಯಸುತ್ತಿಲ್ಲ. ಆದ್ದರಿಂದಲೇ ಅವರೊಂದಿಗೆ 25 ಪ್ರತಿಶತದಷ್ಟು ಒಪ್ಪಂದ ಮಾಡಿಕೊಂಡಿದ್ದೇವೆ. ಮುಂದಿನ 24 ಗಂಟೆಗಳಲ್ಲಿ ನಾವು ಅದನ್ನು ಗಣನೀಯಯವಾಗಿ ಹೆಚ್ಚಳ ಮಾಡಲಿದ್ದೇವೆ. ಏಕೆಂದರೆ, ಅವರು ರಷ್ಯಾದೊಂದಿಗೆ ತೈಲವನ್ನು ಖರೀದಿಸುತ್ತಿದ್ದಾರೆ ಎಂದು ದೂರದರ್ಶನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಷ್ಯಾದ ತೈಲ ಖರೀದಿ ಉಲ್ಲೇಖಿಸಿ ಟ್ರಂಪ್​ ಭಾರತ ಮೇಲೆ ಸುಂಕ ಹೆಚ್ಚಳ ಮಾಡುವುದಾಗಿ ಸೋಮವಾರ(ಆ.4) ಬೆದರಿಕೆ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕೂಡ ಟ್ರಂಪ್ ಅವರ ಸುಂಕ ಬೆದರಿಕೆಗಳನ್ನು "ಸಮರ್ಥನೀಯವಲ್ಲ" ಎಂದು ಹೇಳಿಕೊಂಡಿದೆ. ಅಲ್ಲದೆ ದೇಶದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದೆ. ಇದರ ನಡುವೆ ಇದೀಗ ಮತ್ತೊಮ್ಮೆ ಟ್ರಂಪ್​ ಹೇಳಿಕೆ ನೀಡಿದ್ದಾರೆ.

ಭಾರತ ವಿರುದ್ಧ ಟ್ರಂಪ್ ಗುಡುಗಲು ಇದೇ ಕಾರಣ​

ಯುಕ್ರೇನ್ ಮೇಲೆ ನಿರಂತರವಾಗಿ ಯುದ್ಧ ನಡೆಸುತ್ತಿರುವ ರಷ್ಯಾ ಜೊತೆಗೆ ಭಾರತ ಕೈಜೋಡಿಸಿರುವ ವಿಷಯ ಟ್ರಂಪ್​ಗೆ ಹಿಡಿಸಲಿಲ್ಲ. ದೊಡ್ಡ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ ಸರ್ಕಾರದ ನಿರ್ಧಾರ ಅಮೆರಿಕ ಅಧ್ಯಕ್ಷರಿಗೆ ಸರಿ ಅನಿಸಲಿಲ್ಲ. ರಷ್ಯಾ, ಯುಕ್ರೇನ್​ ವಿರುದ್ಧದ ದಾಳಿ ನಿಲ್ಲಿಸಬೇಕು ಎಂದರೆ ಇತರೆ ದೇಶಗಳು ಅವರೊಂದಿಗೆ ವ್ಯಾಪಾರ-ವಹಿವಾಟು ನಡೆಸಬಾರದು ಎಂಬುದು ಟ್ರಂಪ್​ ಉದ್ದೇಶ. ಆದರೆ, ಇದನ್ನೂ ಮೀರಿ ಭಾರತ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿರುವುದು ಟ್ರಂಪ್​ ಸುಂಕ ಸಮರ ಮತ್ತು ಹೆಚ್ಚುವರಿ ದಂಡಕ್ಕೆ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net