

ರಾಣೆಬೆನ್ನೂರ: ಇಂದಿನ ತಂತ್ರಜ್ಞಾನ ಮತ್ತು ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ವಿದ್ಯಾರ್ಥಿಗಳು ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು ಪ್ರಾಚಾರ್ಯ ಡಾ. ಶಿವಕುಮಾರ ಬಿ. ಹೇಳಿದರು.
ನಗರದ ತರಳಬಾಳು ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ 2022-23ನೇ ಸಾಲಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಮೌಲ್ಯಗಳು ಮತ್ತು ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು. ಬೆಳೆಯುತ್ತಿರುವ ಈ ಜಗತ್ತಿಗೆ ಪೈಪೋಟಿ ನೀಡಿ ಕೊಡುಗೆ ನೀಡಬೇಕು ಎಂದರು.
150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಅಕಾಡೆಮಿಕ್ ಡೀನ್ ಡಾ. ಎಸ್.ಎಫ್. ಕೊಡದ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೋ. ಸಿ.ಎಂ. ಪರಮೇಶ್ವರಪ್ಪ, ಡಾ. ಎಸ್.ಜಿ. ಮಾಕನೂರು, ಡಾ. ಬಿ. ಮಹೇಶ್ವರಪ್ಪ, ಡಾ. ಜೆ.ಓ. ಕಿರಣ, ದಿನೇಶ ಮಾಗನೂರ, ಎಸ್. ಲೋಕೇಶ, ಲತಾ ಜಾಧವ ಮತ್ತಿತರರು ಉಪಸ್ಥಿತರಿದ್ದರು.