

Pushpa 2: ಪುಷ್ಪ 2 ಚಿತ್ರದಲ್ಲಿ ತಾರಕ್ ಪೊನ್ನಪ್ಪ ವಿಲನ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ತೋರಿಸಿರುವ ಅವರ ನೋಟವು ಹಾರ್ದಿಕ್ ಪಾಂಡ್ಯ ಅವರ ಹಿರಿಯ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರ ನೋಟಕ್ಕೆ ಹೊಂದಿಕೆಯಾಗುತ್ತದೆ. ಚಿತ್ರದಲ್ಲಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸಹೋದರ, ಆರ್ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಇದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ಬ್ಲಾಕ್ ಬಸ್ಟರ್ ಚಿತ್ರ ‘ಪುಷ್ಪ 2’ ಚಿತ್ರಮಂದಿರಗಳಲ್ಲಿ ಸಖತ್ ಸದ್ದು ಮಾಡ್ತಿದೆ. ಮೊದಲ ವಾರದಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ, 1000 ಕೋಟಿಯತ್ತ ಸಾಗ್ತಿದೆ. ಚಿತ್ರದಲ್ಲಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸಹೋದರ, ಆರ್ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಇದ್ದಾರೆ . ಕೃನಾಲ್ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ನಿಭಾಯಿಸಿದ್ದಾರೆ ಎಂದು ಮಾತಾಡಿಕೊಳ್ತಿದ್ದಾರೆ.
ಅಭಿಮಾನಿಗಳು ಖಳನಟನನ್ನು ಕೃನಾಲ್ ಪಾಂಡ್ಯಗೆ ಹೋಲಿಸಿದ್ದಾರೆ. ಇದರಿಂದ ಗೊತ್ತಿರದ ಕೆಲವು ಸಿನಿಮಾ ವೀಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ಅವರು ಕೃನಾಲ್ ಪಾಂಡ್ಯ ಎಂದೇ ನಂಬಿದ್ದಾರೆ. ಅಂದ್ಹಾಗೆ ಅವರು ಕೃನಾಲ್ ಪಾಂಡ್ಯ ಅಲ್ಲ, ಬದಲಾಗಿ ತಾರಕ್ ಪೊನ್ನಪ್ಪ. ಪುಷ್ಪ 2 ಚಿತ್ರದಲ್ಲಿ ಕೃನಾಲ್ ಪಾಂಡ್ಯ ಅವರಂತೆಯೇ ಕಾಣುತ್ತಾರೆ.
ತಾರಕ್ ಪೊನ್ನಪ್ಪ ಪುಷ್ಪ 2 ಚಿತ್ರದಲ್ಲಿ ಕೊಗತಂ ಬುಗ್ಗಾರೆಡ್ಡಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ಒಂದು ದೃಶ್ಯದಲ್ಲಿ ಬಳೆಗಳು, ಮೂಗುತಿ, ನೆಕ್ಲೇಸ್ ಮತ್ತು ಕಿವಿಯೋಲೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಅಭಿಮಾನಿಗಳ ಮನಗೆದ್ದಿದೆ. ಚಿತ್ರದಲ್ಲಿನ ಅವರ ಲುಕ್ ಕೃನಾಲ್ ಪಾಂಡ್ಯಗೆ ಹೋಲಿಕೆ ಆಗ್ತಿದೆ. ಹೀಗಾಗಿ ಕೃನಾಲ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಅಭಿಮಾನಿಗಳು ತಮಾಷೆಯಾಗಿ ಕಾಮೆಂಟ್ ಮಾಡ್ತಿದ್ದಾರೆ.
ತಾರಕ್ ಪೊನ್ನಪ್ಪ ಲುಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಪಾತ್ರವನ್ನು ಕೃನಾಲ್ ಪಾಂಡ್ಯ ನಿರ್ವಹಿಸಿದ್ದಾರೆ ಎಂದು ಕೆಲವು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಕೃನಾಲ್ ಪಾಂಡ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪುಷ್ಪ 2ಕ್ಕೂ ಮುನ್ನ ತಾರಕ್ ಪೊನ್ನಪ್ಪ ದೇವಾ ಭಾಗ 1ರಲ್ಲೂ ನಟಿಸಿದ್ದರು. ದೇವ್ರಾ ಭಾಗ 1 ರಲ್ಲಿ ಜೂನಿಯರ್ ಎನ್ಟಿಆರ್, ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ ಸೂಪರ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 2 ರಲ್ಲಿ ದಯಾ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಭಾವಿತರಾದರು.