ಬೇರೊಬ್ಬಳ ಜತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಕರ; ಕುದಿಯುವ ಎಣ್ಣೆ ಸುರಿದ ಯುವತಿ !

Tamil Nadu woman pours hot oil on boyfriend
Published on

ಚೆನ್ನೈ: ಸಂಬಂಧ ಮುರಿದು ಬಿದ್ದರೆ ಅದರಿಂದ ಚೇತರಿಕೆಗೆ ಕೆಲವು ದಿನಗಳು ಬೇಕಾಗಬಹುದು. ಆದರೆ ಅದೇ ಬಿರುಕು ನಿಮ್ಮನ್ನು ಬಲಿಷ್ಠವಾಗಿಸುತ್ತದೆ. ಇಲ್ಲೊಬ್ಬಳು ಯುವತಿ ವಂಚಿಸಿದ ಪ್ರಿಯಕರನ ಮೇಲೆ ಕುದಿಯುವ ಎಣ್ಣೆ ಸುರಿದ ಘಟನೆ ತಮಿಳುನಾಡಿನ ಈರೋಡ್‍ನಲ್ಲಿ ನಡೆದಿದೆ.

ಕಾರ್ತಿ (27) ಯುವತಿಯಿಂದ ಹಲ್ಲೆಗೊಳಗಾದ ಯುವಕ , ಮೀನಾ ದೇವಿ ಬಂಧಿತೆ. ಈತ ಭವಾನಿಯ ವರ್ಣಪುರಂ ನಿವಾಸಿಯಾಗಿದ್ದು, ಪೆರುಂದುರೈನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಈತ ತನ್ನ ಸಂಬಂಧಿ ಮೀನಾ ದೇವಿಯೊಂದಿಗೆ ಸಂಬಂಧ ಹೊಂದಿದ್ದ. ಇಬ್ಬರು ಮದುವೆಯಾಗುವ ನಿರ್ಧಾರವನ್ನು ಮಾಡಿದ್ದರು.

ಆದರೆ ಕಾರ್ತಿ ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಮೀನಾದೇವಿ ತಿಳಿದಿದೆ. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ಮೀನಾ ದೇವಿ ಆತನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ.

ಇದರಿಂದಾಗಿ ಕೈ ಮತ್ತು ಮುಖ ಉರಿಯಲಾರಂಭಿಸಿದ್ದರಿಂದ ಕಾರ್ತಿ ನೆಲಕ್ಕೆ ಬಿದ್ದಿದ್ದಾನೆ. ಸಹಾಯಕ್ಕಾಗಿ ಆತನ ಕೂಗು ಕೇಳಿದ ನೆರೆಹೊರೆಯವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾಳೆ.

ಈ ಘಟನೆಗೆ ಸಂಬಂಧಿಸಿ ಮೀನಾದೇವಿಯನ್ನು ಬಂಧಿಸಲಾಗಿದೆ. ಈ ಘಟನೆ ಕುರಿತಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net