

ಚೆನ್ನೈ: ತಮಿಳುನಾಡು ಮೂಲದ ಇಂಜಿನಿಯರ್ ವಿದ್ಯಾರ್ಥಿಗಳು ಕಡಿಮೆ ವೆಚ್ಚದ ಎಲೆಕ್ಟ್ರಿಕ್ ಬೈಕ್ (ವಿದ್ಯುತ್ ಚಾಲಿತ) ತಯಾರು ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೊಯಮತ್ತೂರಿನ ಖಾಸಗಿ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಯಾಗಳಾಗಿದ್ದು, ತಾವು ತಯಾರಿಸಿದ ಎಲೆಕ್ಟ್ರಿಕ್ ಬೈಕ್ 3D ಪ್ರಿಂಟೆಡ್ ಭಾಗಗಳನ್ನು ಅಳವಡಿಸಿರುವುದು ವಿಶೇಷವಾಗಿದೆ.
ಈ ಬಗ್ಗೆ ಮಾತನಾಡಿರುವ ಎಸ್. ಕಿರಣ್ ಲಾಲ್ ಮತ್ತು ವಿ ಭಾರ್ತಿಕನ್, ಇದೊಂದು ಎಲೆಕ್ಟ್ರಿಕ್ ಮೋಟರ್ ಆಗಿದೆ. ಇದಕ್ಕೆ ಲಿಥಿಯಮ್-ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಗಂಟೆಗೆ 27 ಕಿ.ಮೀ ವೇಗದಲ್ಲಿ 25 ಕಿ.ಮೀ ಗೂ ಅಧಿಕ ದೂರವನ್ನ ಕ್ರಮಿಸಲಿದೆ. ಒಮ್ಮೆ ಚಾರ್ಜ್ ಮಾಡಲು 2.5 ಗಂಟೆಗಳನ್ನು ತೆಗೆದುಕೊಳ್ಳಲಿದ್ದು, 0.6 ಯುನಿಟ್ ವಿದ್ಯುತ್ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕಡಿಮೆ ಪ್ರಯಾಣದ ವಾಹನವನ್ನು ಇಂಟ್ರಾಕ್ಯಾಂಪಸ್ ಮೊಬಿಲಿಟಿಯಾಗಿ ಬಳಸಿಕೊಳ್ಳಬಹುದು. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರ್ಕಾರಿ ಕಚೇರಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಹೋಗಲು ವಾಹನ ನೆರವಾಗಲಿದೆ. ದೂರ ಪ್ರಯಾಣ ಹೊರತುಪಡಿಸಿ ಸ್ಥಳೀಯವಾಗಿಯೂ ಉಪಯೋಗಿಸಬಹುದಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)