ಒಂದು ಕೈಯಲ್ಲಿ ಮಗು, ಇನ್ನೊಂದು ಕೈಯಿಂದ ಟ್ರಾಫಿಕ್ ಕಂಟ್ರೋಲ್; ಪೊಲೀಸ್ ವಿಡಿಯೋ ವೈರಲ್

Tamil Nadu Police Control Traffic With Holding Baby
Published on

ತಮಿಳುನಾಡು: ಡ್ಯೂಟಿ ಇರಲಿ, ಇಲ್ಲದಿರಲಿ ಕರ್ತವ್ಯ ಮುಖ್ಯ.. ಸಮವಸ್ತ್ರದಲ್ಲಿದ್ದರೆ ಮಾತ್ರ ಡ್ಯೂಟಿ ಮಾಡಬೇಕಿಲ್ಲ.. ತುರ್ತು ಪರಿಸ್ಥಿತಿಯಲ್ಲೂ ವೃತ್ತಿಪರ ನೀತಿ ಅನುಸರಿಸ ಬೇಕಾಗಿರುವುದು ಮುಖ್ಯವಾಗಿದೆ. ತಮಿಳುನಾಡಿನ ಕಾನ್ಸ್ಟೇಬಲ್ ಒಬ್ಬರು ಒಂದು ಕೈಯಲ್ಲಿ ಮಗು ಹಿಡಿದುಕೊಂಡು ಇನ್ನೊಂದು ಕೈಯಿಂದ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ತಿರುಚ್ಚಿ-ನಾಗೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲ್ಲೆಂದರಲ್ಲಿ ವಾಹನಗಳು ನಿಂತಿದ್ದವು. ಆಗ ಟ್ರಾಫಿಕ್ ನಿಯಂತ್ರಿಸಲು ಒಬ್ಬನೇ ಒಬ್ಬ ಟ್ರಾಫಿಕ್ ಕಾನ್‌ಸ್ಟೆಬಲ್ ಇರಲಿಲ್ಲ. ವಾಹನ ಸವಾರರು ಕೂಡ ವಾಹನಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.

ಈ ಮಧ್ಯೆ ಕಾನ್‌ಸ್ಟೆಬಲ್ ಮಣಿಕಂದನ್ ತಮ್ಮ ಕುಟುಂಬದೊಂದಿಗೆ ಶಾಪಿಂಗ್‌ಗೆ ಹೋಗುತ್ತಿದ್ದರು. ಮೇಲಾಗಿ ಅವರು ಆ ದಿನ ಕರ್ತವ್ಯಕ್ಕೆ ಕೂಡ ಇರಲಿಲ್ಲ. ಅವರೂ ಅದೇ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು. ಈ ವೇಳೆ ಅವರ ಕೈಯಲ್ಲಿ ಈಗಾಗಲೇ ಒಂದೂವರೆ ವರ್ಷದ ಮಗುವಿದೆ. ಒಂದು ಕಡೆ ಟ್ರಾಫಿಕ್ ಜಾಮ್, ಇನ್ನೊಂದು ಕಡೆ ಮಗು ಇದ್ದಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಬೇಕೆಂದು ಒಂದು ಕ್ಷಣವೂ ತಡ ಮಾಡದೆ ಅಖಾಡಕ್ಕಿಳಿದರು. ಒಂದು ಕೈಯಿಂದ ಕಂಕುಳಲ್ಲಿ ಮಗುವನ್ನು ಎತ್ತಿ ಮತ್ತೊಂದು ಕೈಯಿಂದ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ದಾರಿಹೋಕ ಆಟೋ ಚಾಲಕರ ಸಹಾಯ ಪಡೆದು ವಾಹನ ಸವಾರರಿಗೆ ಸೂಚನೆ ನೀಡಿ ಕೊನೆಗೂ ಟ್ರಾಫಿಕ್ ನಿಯಂತ್ರಣಕ್ಕೆ ತಂದರು.

ಅಲ್ಲಿದ್ದವರೊಬ್ಬರು ತಮ್ಮ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ಕಾನ್‌ಸ್ಟೆಬಲ್ ಮಣಿಕಂದನ್ ಅವರ ಕರ್ತವ್ಯದ ಬಗ್ಗೆ ‘ಸಭಾಷ್ ಪೊಲೀಸ್’ ಎಂದು ಕಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net