ತಮಿಳುನಾಡಿನಲ್ಲಿ ಲಾಕ್​​ಡೌನ್​ ವಿಸ್ತರಣೆ; ತಿಂಗಳ ಅಂತ್ಯದವರೆಗೆ ಇಲ್ಲ ಸಡಿಲತೆ

lock
Published on

ಚೆನ್ನೈ: ಕರ್ನಾಟಕದ ಲಾಕ್​ಡೌನ್​ ಅನ್ನು ಎರಡು ವಾರಗಳ ಕಾಲ ವಿಸ್ತರಣೆ ಮಾಡಿರುವ ಬೆನ್ನಲ್ಲೇ ನೆರೆಯ ತಮಿಳುನಾಡಿನಲ್ಲೂ ಅಂತದ್ದೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯಾದ್ಯಂತ ಲಾಕ್​ಡೌನ್​ ಅನ್ನು ಒಂದು ವಾರದ ಕಾಲ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಲಾಕ್​ಡೌನ್​ ಕುರಿತಾಗಿ ಶನಿವಾರದಂದು ರಾಜ್ಯದ ಎಲ್ಲ ಶಾಸಕರ ಜತೆ ಚರ್ಚೆ ನಡೆಸಲಾಗಿದೆ. ಅದರಲ್ಲಿ ಎರಡು ವಾರಗಳ ಕಾಲ ಲಾಕ್​ಡೌನ್​ ವಿಸ್ತರಣೆ ಮಾಡುವ ಬಗ್ಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಮಾತನಾಡಿದ್ದಾರೆ. ಆದರೆ ಅದಕ್ಕೆ ಒಪ್ಪದ ಶಾಸಕರು ಒಂದು ವಾರದ ಕಾಲ ಲಾಕ್​ಡೌನ್​ ಮಾಡುವಂತೆ ಸಲಹೆ ನೀಡಿದ್ದಾರೆ. ಅದರಂತೆ ಮೇ 31ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದೆ.

ಲಾಕ್​ಡೌನ್​ ಅವಧಿಯಲ್ಲಿ ಆಸ್ಪತ್ರೆ, ಮೆಡಿಕಲ್​, ಹಾಲಿನ ಸ್ಟಾಲ್​ಗಳು, ನೀರು ಸೇರಿ ಕೆಲ ಅಗತ್ಯ ಸೇವೆಗಳು ಎಂದಿನಂತೆ ಇರಲಿವೆ. ತರಕಾರಿ, ಹಣ್ಣು, ದಿನಸಿಯನ್ನು ಸರ್ಕಾರದಿಂದಲೇ ಗಾಡಿಯಲ್ಲಿ ತಂದು ಎಲ್ಲೆಡೆ ಮಾರಾಟ ಮಾಡಲಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net