ತಮಿಳುನಾಡು ಬಿಹಾರ ಅಲ್ಲ: ಚುನಾವಣಾ ಆಯೋಗದ SIR ಅಳವಡಿಕೆಯನ್ನು ತಿರಸ್ಕರಿಸಿದ ಡಿಎಂಕೆ ಸಚಿವ ದುರೈ ಮುರುಗನ್

Durai Murugan 11
Published on

SIR: ಮುಂಬರುವ ತಮಿಳುನಾಡಿನ ಚುನಾವಣೆಯಲ್ಲಿ ಭಾರತೀಯ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ವಯಿಸುವುದನ್ನು ತಮಿಳುನಾಡು ಸಚಿವ ದುರೈ ಮುರುಗನ್ ಗುರುವಾರ (ಸೆಪ್ಟೆಂಬರ್,11) ಬಲವಾಗಿ ತಿರಸ್ಕರಿಸಿದ್ದಾರೆ.

SIRಯನ್ನು ರಾಷ್ಟ್ರವ್ಯಾಪಿ ಜಾರಿ ಯೋಜನೆಗೆ ಪ್ರತಿಕ್ರಿಯಿಸಿದ ಮುರುಗನ್, ತಮಿಳುನಾಡು ಬಿಹಾರವಲ್ಲ. ತಮಿಳುನಾಡಿನ ಜನರು ಜಾಗೃತರಾಗಿದ್ದಾರೆ. ಇಲ್ಲಿನ ಆಡಳಿತ ಅಲ್ಲಿನಂತಿಲ್ಲ, ಇಲ್ಲಿ ನಮಗೆ ದಳಪತಿಯ ನಾಯಕತ್ವವಿದೆ. ಅಲ್ಲದೆ ಇಂತಹ ತಂತ್ರಗಳು ತಮಿಳುನಾಡಿನಲ್ಲಿ ಅಥವಾ ನಮ್ಮ ನಾಯಕನೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಚುನಾವಣಾ ಆಯೋಗವನ್ನು ಟೀಕಿಸಿದ್ದಾರೆ.

ಮುರುಗನ್​ ತೀಕ್ಷ್ಣವಾದ ಹೇಳಿಕೆಗಳು, ರಾಜಕೀಯ ಪ್ರೇರಿತವೆಂದು ಮತ್ತು ಕೇಂದ್ರ ಯೋಜನರಗಳ ಬಗ್ಗೆ, ವಿಶೇಷವಾಗಿ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಬಗ್ಗೆ ಡಿಎಂಕೆಯ ಸಂದೇಹವನ್ನು ತೋರಿಸುತ್ತಿದೆ.

ಚುನಾವಣಾ ಆಯೋಗದ ರಾಷ್ಟ್ರವ್ಯಾಪಿ ಯೋಜನೆ

2026ರ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಎಸ್ಐಆರ್​ ಆನ್ನು ಜಾರಿಗೊಳಿಸುವುದು. ಮತದಾರರ ನಿಖರತೆಯನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸುವ ಮೂಲಕ ದೇಶಾದ್ಯಂತ SIR ಆನ್ನು ಜಾರಿಗೆ ತರಲು ಚುನಾವಣಾ ಆಯೋಗ (ECI) ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗೆ ನಡೆದ ಮುಖ್ಯ ಚುನಾವಣಾ ಅಧಿಕಾರಿಗಳ (CEO) ಸಭೆಯಲ್ಲಿ ಮತದಾರರ ಅರ್ಹತೆಗಾಗಿ ಸರಳೀಕೃತ ದಾಖಲೆ ಪರಿಶೀಲನಾ ಪ್ರಕ್ರಿಯೆ ಸೇರಿದಂತೆ ಲಾಜಿಸ್ಟಿಕ್ಸ್ ಬಗ್ಗೆ ಚರ್ಚಿಸಲಾಯಿತು.

ಬಿಹಾರದ ಮಾದರಿಯಿಂದ ಕಲಿಯುವುದು

ಎಸ್‌ಐಆರ್ ಅನ್ನು ಮೊದಲು ಬಿಹಾರದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಯಿತು. ಇಲ್ಲಿ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿನ ನಕಲು ಮತ್ತು ನಿಖರತೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾದರು. ಬಿಹಾರದ ಸಿಇಒ ಇತರ ರಾಜ್ಯಗಳ ಸಹವರ್ತಿಗಳೊಂದಿಗೆ ಸಮಲೋಚನೆ ನಡೆಸಿ, ಇರುವ ಸವಾಲುಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಂಡರು. 2026 ರಲ್ಲಿ ಚುನಾವಣೆ ಎದುರಿಸುತ್ತಿರುವ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಂತಹ ಪ್ರಮುಖ ರಾಜ್ಯಗಳಲ್ಲಿ ಎಸ್ಐಆರ್ ಮಾದರಿಯನ್ನು ಘೋಷಿಸಲು ಆಯೋಗ ಉದ್ದೇಶಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net