ಹೊಟ್ಟೆನೋವು ಎಂದ ಬಾಲಕಿಯ ಹೊಟ್ಟೆಯೊಳಗಿಂದ ವೈದ್ಯರು ತೆಗೆದದ್ದು ಏನು ಗೊತ್ತಾ..? ಕೇಳಿದರೆ ಶಾಕ್​​ ಆಗೋದು ಗ್ಯಾರಂಟಿ!

TN
Published on

ಕೊಯಮತ್ತೂರು: 7ನೇ ತರಗತಿ ಓದುತ್ತಿರುವ ಬಾಲಕಿ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವು ಎನ್ನುತ್ತಿದ್ದಳು. ಪಾಲಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರದೊಯ್ದಿದ್ದಾರೆ.

ಸ್ಕ್ಯಾನ್​ ಮಾಡಿದಾಗ ಹೊಟ್ಟೆಯಲ್ಲಿ ಗುಂಡನೆಯ ವಸ್ತು ಇರುವುದು ತಿಳಿದಿದೆ. ಅದನ್ನು ಎಂಡೋಸ್ಕೋಪಿ ಚಿಕಿತ್ಸೆ ಮೂಲಕ ತೆಗೆಯಲು ವೈದ್ಯರು ಮುಂದಾದರೂ, ಅದು ವಿಫಲವಾಯಿತು. ನಂತರ ಶಸ್ತ್ರಚಿಕಿತ್ಸೆ ಮೂಲಕ ಆ ವಸ್ತುವನ್ನು ಹೊರತೆಗೆಯಲು ನಿರ್ಧರಿಸಲಾಯಿತು.

ಸ್ಥಳಿಯ ಖಾಸಗಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ನಡೆಸಿ, ಆ 13 ವರ್ಷದ ಬಾಲಕಿಯ ಹೊಟ್ಟೆಯಿಂದ ತೆಗೆದದ್ದು ಬರೋಬ್ಬರಿ ಅರ್ಧ ಕೆಜಿಯಷ್ಟು ಕೂದಲು, ಪ್ಲಾಸ್ಟಿಕ್​ ಮತ್ತು ಶಾಂಪು ಪ್ಯಾಕೆಟ್​ಗಳನ್ನು.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ ಮುಖ್ಯಸ್ಥ ಸರ್ಜನ್​ ಡಾ. ಗೋಕುಲ್​ ಕೃಪಾಶಂಕರ್​, ಬಾಲಕಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾಳೆ. ಆದ್ದರಿಂದ ಆಕೆ ಪ್ಲಾಸ್ಟಿಕ್​, ಶಾಂಪು ಪಾಕೆಟ್​ ಮತ್ತು ಕೂದಲಿನಂತಹ ವಸ್ತುಗಳನ್ನು ತಿಂದಿದ್ದಾಳೆ. ಇದರಿಂದ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು ಎಂದು ಮಾಹಿತಿ ನೀಡಿದ್ದಾರೆ.

ಬಾಲಕಿಯ ಹತ್ತಿರ ಸಂಬಂಧಿಯೊಬ್ಬರು ಇತ್ತೀಚೆಗೆ ಮರಣ ಹೊಂದಿದ್ದರು. ಆ ಘಟನೆ ಈಕೆಯ ಮಾನಸಿಕ ಖಿನ್ನತೆಗೆ ಕಾರಣ. ಶಸ್ತ್ರಚಿಕಿತ್ಸೆ ನಂತರ ಆಕೆ ಪೂರ್ಣ ಗುಣಮುಖಳಾಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net