VIDEO: ಮೀನಿನ ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಡಾಲ್ಫಿನ್; ಮೀನುಗಾರರಿಂದ ರಕ್ಷಣೆ

Dolfin
Published on

ಚೆನ್ನೈ: ಸಮುದ್ರ ಮೀನುಗಾರಿಕೆ ವೇಳೆ ಬಲೆಗೆ ಸಿಲುಕಿದ್ದ ಎರಡು ಡಾಲ್ಫಿನ್ ಮೀನುಗಳನ್ನು ತಮಿಳುನಾಡಿನ ಮೀನುಗಾರರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಮನಾಥಪುರ ಜಿಲ್ಲೆಯ ಕೀಲಕರನಿ ವ್ಯಾಪ್ತಿಯಲ್ಲಿ ಮೀನುಗಾರರ ಬಲೆಗೆ ಡಾಲ್ಫಿನ್ ಮೀನುಗಳು ಸಿಕ್ಕಿ ಹಾಕಿಕೊಂಡಿವೆ. ಮೀನುಗಾರರು ದಡಕ್ಕೆ ಬಂದಾಗ ಡಾಲ್ಫಿನ್ ಮೀನು ಬಲೆಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಮೀನುಗಾರರು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದೊಂದಿಗೆ ಬಲೆಯಿಂದ ಬಿಡಿಸಿ, ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ.

ಈ ಬಗ್ಗೆ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ, ಇದು ಸಮುದಾಯವೊಂದರ ದೊಡ್ಡ ಶಕ್ತಿಗೆ ಉದಾಹರಣೆ. ಹೀಗಾಗಿ ಈ ರಕ್ಷಣಾ ಕಾರ್ಯಾಚರಣೆಯ ಪ್ರತಿಯೊಬ್ಬನನ್ನು ಗೌರವಿಸುತ್ತೇವೆ. ಡಿಎಫ್​ಓಗಳಾದ ಜಗದೀಶ್ ಹಾಗೂ ರಾಮ್​​ನದ್​ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಸಮುದ್ರ ದಡದಲ್ಲಿ ಡಾಲ್ಪಿನ್‌ಗಳನ್ನು ಮೀನಿನ ಬಲೆಯಿಂದ ಬಿಡಿಸುತ್ತಿರುವುದನ್ನು ಕಾಣಬಹುದು. ನಂತರ ಮೀನುಗಾರರು ಡಾಲ್ಪಿನ್‌ನನ್ನು ಸಮುದ್ರ ತೀರದಿಂದ, ನೀರಿಗೆ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net