Tamil Nadu | ಒಂದೇ ಕುಟುಂಬದ ಐವರು ಕಾರಿನಲ್ಲಿ ಶವವಾಗಿ ಪತ್ತೆ, ಪ್ರಕರಣ ದಾಖಲು

tn
Published on

ಚೆನ್ನೈ: ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆಗೆ ಶರಣಾದ ಘಟನೆ ತಮಿಳುನಾಡಿನ ನಡೆದಿದೆ.  ಪುದುಕೊಟ್ಟಾಯಿ ಜಿಲ್ಲೆಯಲ್ಲಿ ಕಾರೊಂದರಲ್ಲಿ ಐವರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ತಿರುಚ್ಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಂತಿರುವುದು ಪತ್ತೆಯಾಗಿತ್ತು. ಸಂಜೆಯಿಂದ ಅದೇ ಸ್ಥಳದಲ್ಲಿ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯ ವರದಿಗಳ ಪ್ರಕಾರ, 50 ವರ್ಷದ ಉದ್ಯಮಿ ಮಣಿಕಂಠನ್, ಅವರ ಪತ್ನಿ ನಿತ್ಯ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಅವರು ಸೇಲಂ ನಿವಾಸಿಗಳು ಎಂದು ತಿಳಿದು ಬಂದಿದೆ.

ತಮ್ಮ ಮನೆಯಿಂದ ಸುಮಾರು 200 ಕಿಮೀ ದೂರದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದ್ದು, ಪ್ರಾಥಮಿಕ ತನಿಖೆ ಬಳಿಕ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಂದ ಕಾರಿನಿಂದ ಪತ್ರವೊಂದನ್ನು ವಶಪಡಿಸಿಕೊಂಡಿದ್ದಾರೆ. ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದು ಏನು ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಕುಟುಂಬವು ಸಾಲಗಾರರಿಂದ ಒತ್ತಡಕ್ಕೆ ಒಳಗಾಗಿದೆಯೇ ಎನ್ನುವ ಬಗ್ಗೆ ತನಿಕೆ ನಡೆಸಲಾಗುತ್ತಿದೆ. ಲೋಹದ ವ್ಯಾಪಾರದಲ್ಲಿದ್ದ ಮಣಿಕಂದನ್ ಸಾಲದಲ್ಲಿದ್ದರು ಎಂದು ವರದಿಗಳು ಸೂಚಿಸುತ್ತವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುದುಕೊಟ್ಟಾಯಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net