ತಮಿಳುನಾಡು ವಿಧಾನಸಭೆ ಚುನಾವಣೆ; ದಳಪತಿ ವಿಜಯ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ ಟಿವಿಕೆ| Thalapathy Vijay

ವಿಜಯವಾಣಿ - 2025-11-05T141322.486
Published on

StartFragment ಚೆನ್ನೈ: ಕರೂರು ಕಾಲ್ತುಳಿತ ದುರಂತದ ಬಳಿದ ಇದೇ ಮೊದಲ ಬಾರಿಗೆ ಇಂದು (ನ. 05) ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಾಮಾನ್ಯ ಸಭೆಯಲ್ಲಿ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಿ ದಳಪತಿ ವಿಜಯ್(Thalapathy Vijay) ಅವರನ್ನು ಘೋಷಿಸಿದ್ದು, ಮೈತ್ರಿ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನೂ ಸಹ ಅವರಿಗೆ ನೀಡಿದೆ ಎಂದು ವರದಿಯಾಗಿದೆ.

ಪಕ್ಷದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾದ 12 ನಿರ್ಣಯಗಳಲ್ಲಿ, ಪಕ್ಷವು ಕರೂರಿನಲ್ಲಿ ಸಂಭವಿಸಿದ ಸಾವುಗಳಿಗೆ ಸಂತಾಪ ಸೂಚಿಸಿದ್ದು, ಈ ದುರಂತವು ದೊಡ್ಡ ಪ್ರಮಾಣದ ಭದ್ರತಾ ಲೋಪಗಳು ಮತ್ತು ತಮ್ಮ ಪಕ್ಷದ ಪ್ರಭಾವವನ್ನು ತಡೆದುಕೊಳ್ಳಲಾಗದೇ ಉದ್ದೇಶಪೂರ್ವಕವಾಗಿ ಮಾಡಲಾದ ಘಟನೆ ಎಂದು ಹೇಳಿದೆ.

ಇನ್ನೂ ಆಡಳಿತರೂಢ ಡಿಎಂಕೆಯನ್ನು ಟೀಕಿಸಿರುವ ಸಭೆಯೂ, ಡಿಎಂಕೆ ಮಾಧ್ಯಮವನ್ನು ಸಾಧ್ಯವಾದಲ್ಲೆಲ್ಲಾ ನಿಯಂತ್ರಿಸುವ ಸಂಬಂಧಿಕರನ್ನು ಹೊಂದಿದೆ. ನಮ್ಮ ಪಕ್ಷದ ಉನ್ನತ ನಾಯಕರ ವಿರುದ್ಧ ಸುಳ್ಳನ್ನು ಹರಡಲು ತಮ್ಮ ಊಟಿ ವಿಭಾಗವನ್ನು ಬಳಸುತ್ತಿದೆ ಎಂದು ಆರೋಪಿಸಿದೆ.

ಹಾಗೆಯೇ ವಿಜಯ್ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪಕ್ಷದ ಸಾರ್ವಜನಿಕ ಸಭೆಗಳಿಗೆ 'ಯಾವುದೇ ಪಕ್ಷಪಾತವಿಲ್ಲದೆ' ಭದ್ರತೆ ಒದಗಿಸುವಂತೆ ತಮಿಳುನಾಡು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net