ತಮಿಳಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ನಿಧನ!

Untitled design - 2023-09-08T105955.489
Published on

ತಮಿಳುನಾಡು: ತಮಿಳು ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ದೇಶಕ ಮಾರಿಮುತ್ತು ಹಠಾತ್​ ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ.

ಟಿವಿ ಕಾರ್ಯಕ್ರಮಕ್ಕೆ ಡಬ್ಬಿಂಗ್ ಮಾಡುವ ವೇಳೆ ಹೃದಯಾಘಾತವಾಗಿದೆ ಎಂದು ವರದಿ ತಿಳಿಸಿದೆ. 58ನೇ ವಯಸ್ಸಿಗೆ ಇಹ ಲೋಕ ತ್ಯಜಿಸಿದ ನಟ, ಇಂದು ಮುಂಜಾನೆ 8:30ರ ವೇಳೆಗೆ ಹೃದಯಾಘಾತ ಸಂಭವಿಸಿದೆ. ಇತ್ತೀಚಿಗೆ ಬಿಡುಗಡೆಯಾಗಿದ್ದ ರಜನಿಕಾಂತ್ ನಟನೆಯ ಜೈಲರ್​ ಚಿತ್ರದಲ್ಲಿ ಅಭಿನಯಿಸಿದ್ದರು.

ಯ್ಯೂಟ್ಯೂಬ್​ನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದ ನಿರ್ದೇಶಕರ ನಿಧನದ ಸುದ್ದಿ ಇದೀಗ ಭಾರತೀಯ ಚಿತ್ರರಂಗದವರಿಗೆ ಅತೀವ ದುಃಖ ಉಂಟು ಮಾಡಿದೆ. ಜೈಲರ್ ಚಿತ್ರದಲ್ಲಿ ಖಳನಾಯಕ ವಿನಾಯಕ್ ಅವರೊಟ್ಟಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಮರಿಮುತ್ತು ಅವರ ಹಠಾತ್ ನಿಧನಕ್ಕೆ ತಮಿಳು ಚಿತ್ರರಂಗ ಸೇರಿದಂತೆ ಅನ್ಯ ಚಿತ್ರರಂಗದ ಕಲಾವಿದರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net